ತಿರುವನಂತಪುರ: ಬಿಜೆಪಿಗೆ ಸೇರಿದ ಯುವ ಕಾಂಗ್ರೆಸ್ ಮುಖಂಡರು ಕೆಲವೇ ಗಂಟೆಗಳಲ್ಲಿ ಮತ್ತೆ ಕಾಂಗ್ರೆಸ್ ಗೆ ಮರಳಿದ ವಿದ್ಯಮಾನ ತಿರುವನಂತಪುರದಲ್ಲಿ ನಡೆದಿದೆ. ಬಿಜೆಪಿ ಪ್ರಚಾರದ ಸಂದರ್ಭದಲ್ಲಿ ಯುವ ಕಾಂಗ್ರೆಸ್ ತಿರುವನಂತಪುರ ಜಿಲ್ಲಾ ಕಾರ್ಯದರ್ಶಿ ಎಂ ಮಿಥುನ್ ಕಾಂಗ್ರೆಸ್ ಗೆ ಮತ್ತೆ ಮರಳಿದರು. ಬಿಜೆಪಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಭ್ರಮಾಚರಣೆಯನ್ನು ನಡೆಸುತ್ತಿರುವ ವೀಡಿಯೋಗಳನ್ನು ಹರಿಯಬಿಡುತ್ತಿರುವ ಮಧ್ಯೆ ಮಿಥುನ್ ಬಿಜೆಪಿಯಿಂದ ಮತ್ತೆ ಮಾತೃಪಕÉ್ಷ್ಕ್ಕೀ ಮರಳಿರುವುದು ಗಮನಾರ್ಹವಾಗಿದೆ.
ಬಿಜೆಪಿ ತಿರುವನಂತಪುರ ಜಿಲ್ಲಾಧ್ಯಕ್ಷ ವಿ.ವಿ.ರಾಜೇಶ್ ಅವರು ಮಿಥುನ್ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ವಿಡಿಯೋವನ್ನು ಫೇಸ್ ಬುಕ್‍ನಲ್ಲಿ ಹಂಚಿಕೊಂಡಿದ್ದರು. ಕಾಂಗ್ರೆಸ್ ನ ಅವಕಾಶವಾದಿ ರಾಜಕೀಯ ಮತ್ತು ಸ್ವಜನಪಕ್ಷಪಾತವನ್ನು ವಿರೋಧಿಸಿ ಮಿಥುನ್ ಬಿಜೆಪಿಗೆ ಸೇರುತ್ತಿದ್ದಾರೆ ಎಂದು ವಿ.ವಿ.ರಾಜೇಶ್ ಶನಿವಾರ ಹೇಳಿದ್ದರು. ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಸ್ಥಾನ ಸಿಗದ ಕಾರಣ ಮಿಥುನ್ ಪಕ್ಷವನ್ನು ತೊರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ, ಬಿಜೆಪಿ ಅವರನ್ನು ಒತ್ತಡಕ್ಕೆ ಸಿಲುಕಿಸಿದೆ ಮತ್ತು ಮಾತನಾಡಲು ಅವಕಾಶ ನೀಡಿಲ್ಲ ಎಂದು ಮಿಥುನ್ ಹೇಳಿದ್ದಾರೆ. ಮಿಥುನ್ ಅವರು ತಿನ್ನಲು ಸಹ ಸಾಧ್ಯವಾಗದಷ್ಟು ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಿರುವರು. ಇಂತಹ ಗೊಂದಲದ ಮಧ್ಯೆ ಮಿಥುನ್ ಮತ್ತೆ ಕಾಂಗ್ರೆಸ್ಸ್ ಗೆ ಮರಳಿದ್ದು ಬಿಜೆಪಿಗೆ ಮುಖಭಂಗವಾಗಿದೆ ಎಂದು ಉಲ್ಲೇಖವಾಗಿದೆ.




