ನವದೆಹಲಿ: ಕೋವಿಡ್ ನಿಯಂತ್ರಣದಲ್ಲಿ ಕೇರಳ ವಿಫಲವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಭಾನುವಾರ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸಾಪ್ತಾಹಿಕ ಸೋಷಿಯಲ್ ಮೀಡಿಯಾ ಶೋ 'ಸಂಡೇ ಡಿಬೇಟ್' ಗೆ ಮುಂಚಿತವಾಗಿ ಯೂಟ್ಯೂಬ್‍ನಲ್ಲಿ ಬಿಡುಗಡೆಯಾದ ಈ ಟೀಸರ್ ನಲ್ಲಿ ಕೇರಳವನ್ನು ಟೀಕಿಸುವ ಭಾಗಗಳೂ ಸೇರಿವೆ.
ವೀಡಿಯೊದ ಟೀಸರ್ ನಲ್ಲಿ ಆರೋಗ್ಯ ಸಚಿವರು, "ಗಂಭೀರ ನಿರ್ಲಕ್ಷ್ಯಕ್ಕೆ ಕೇರಳ ಭಾರೀ ಬೆಲೆ ನೀಡಿದೆ" ಎಂದು ಹೇಳಿದ್ದಾರೆ. ಮೊದಲ ಹಂತದಲ್ಲಿ, ವೈರಸ್ ವಿರುದ್ಧ ಉತ್ತಮ ರಕ್ಷಣೆ ಕೇರಳದಲ್ಲಿ ಕಂಡುಬಂದಿತ್ತು ಎಂದು ವೀಡಿಯೊದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸಂಡೇ ಟಾಕ್ ಶೋನ ಆರನೇ ಕಂತಿಗೆ ಮುಂಚಿತವಾಗಿ ಬಿಡುಗಡೆಯಾದ ಟೀಸರ್ ನಲ್ಲಿ ಕೇರಳದ ಟೀಕೆಗಳ ಬಗ್ಗೆ ಬೇರೆ ಉಲ್ಲೇಖಗಳಿಲ್ಲ.
ರಾಷ್ಟ್ರದಲ್ಲೇ ಕೋವಿಡ್ ಸೋಂಕು ಮೊದಲಿಗೆ ಕೇರಳದಲ್ಲಿ ಕಂಡುಬಂದಿತ್ತು. ಮೊದಲ ಹಂತದಲ್ಲಿ, ಆರೋಗ್ಯ ಇಲಾಖೆಯು ವೈರಸ್ ಹರಡುವುದನ್ನು ಸಂಪೂರ್ಣವಾಗಿ ತಡೆಯಲು ಯಶಸ್ವಿಯೂ ಆಗಿತ್ತು. ವೈರಸ್ ಭಾರತದ ಇತರ ಭಾಗಗಳಿಗೆ ಮತ್ತು ಕೊಲ್ಲಿ ಪ್ರದೇಶಕ್ಕೂ ಹರಡಿದ್ದರಿಂದ ಕೋವಿಡ್ ಕೇರಳದಲ್ಲಿ ಮತ್ತೆ ವರದಿಯಾಗಿದೆ. ಒಂದು ಹಂತದಲ್ಲಿ, ಚಿಕಿತ್ಸೆಗೆ ಒಳಗಾಗುವ ರೋಗಿಗಳ ಸಂಖ್ಯೆ ನಾಮಮಾತ್ರವಾಗಿ ಕುಸಿದಿತ್ತು. ಆದರೆ ಕೇಂದ್ರ ಸರ್ಕಾರವು ಅಂತರರಾಜ್ಯ ಪ್ರಯಾಣ ಪರವಾನಗಿ ಸೇರಿದಂತೆ ಹಲವಾರು ರಿಯಾಯಿತಿಗಳನ್ನು ನೀಡಿದ್ದರಿಂದ ರೋಗಿಗಳ ಸಂಖ್ಯೆ ಮತ್ತೆ ಏರಿತು. ಜೊತೆಗೆ ಕೇರಳವು ದೇಶದಲ್ಲೇ ಅತ್ಯಂತ ಹೆಚ್ಚು ಸೋಂಕು ವ್ಯಾಪಕತೆ ಉಳ್ಳ ರಾಜ್ಯವಾಗಿದ್ದರೂ ಅಗತ್ಯದ ದೈನಂದಿನ ಪರೀಕ್ಷೆಗಳಲ್ಲಿ ತೀವ್ರ ಹಿಂದಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಪ್ರಸ್ತಾಪಿಸಿದ್ದಾರೆ.
ಶನಿವಾರವಷ್ಟೇ, 7283 ಕೋವಿಡ್ ಸೋಂಕಿತರನ್ನು ಗುರುತಿಸಲಾಗಿದೆ. ಆದರೆ ರಾಜ್ಯದಲ್ಲಿ ಕೇವಲ 24 ಗಂಟೆಗಳಲ್ಲಿ 51836 ಕೋವಿಡ್ ಪರೀಕ್ಷೆಗಳನ್ನು ಮಾತ್ರ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಬೊಟ್ಟುಮಾಡಿರುವರು. ಕೇರಳದ ಸೋಂಕು ಹರಡುವಿಕೆಯು ರಾಷ್ಟ್ರೀಯ ಸರಾಸರಿಗಿಂತ ದ್ವಿಗುಣವಾಗಿದೆ ಮತ್ತು ಒಂದು ಮಿಲಿಯನ್ ಜನರ ಮೇಲೆ ನಡೆಸಿದ ಕೋವಿಡ್ ಪರೀಕ್ಷೆಗಳ ಸಂಖ್ಯೆಯಲ್ಲಿ ಕೇರಳ ದೆಹಲಿ ಮತ್ತು ಪುದುಚೇರಿಗಿಂತ ಹಿಂದುಳಿದಿದೆ ಎಂದು ವರದಿಯಾಗಿದೆ.
ವಿಶ್ವದ ಮೊದಲ ಕೋವಿಡ್ 19 ಪ್ರಕರಣ ಚೀನಾದಲ್ಲಿ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳುವ ಮೂಲಕ ಟೀಸರ್ ಪ್ರಾರಂಭವಾಗುತ್ತದೆ. ಭಾರತದಲ್ಲಿ ಮೂಗಿನ ಮೂಲಕ ಕೊವಿಡ್ 19 ಲಸಿಕೆ ಬಗ್ಗೆ ಯಾವುದೇ ಕ್ಲಿನಿಕಲ್ ಪ್ರಯೋಗಗಳಿಲ್ಲ ಎಂದು ಸಚಿವರು ಹೇಳಿದರು. ಭಾರತದಲ್ಲಿ ಈವರೆಗೆ ಕೋವಿಡ್ 19 ವೈರಸ್‍ನಲ್ಲಿ ಯಾವುದೇ ರೂಪಾಂತರ ಕಂಡುಬಂದಿಲ್ಲ ಎಂದು ಸಚಿವರು "ಭರವಸೆ" ನೀಡಿದರು.




