ಕಣ್ಣೂರು: ಕೂತುಪರಂಬದಲ್ಲಿ 16 ವರ್ಷಗಳ ಹಿಂದೆ ಶೂಟೌಟ್ ನಲ್ಲಿ ಗಂಭೀರವಾಗಿ ಗಾಯಗೊಂಡು ಅಚೇತನಾವಸ್ಥೆಯಲ್ಲಿರುವ ಪುಷ್ಪನ್ ಅವರ ಸಹೋದರ ಬಿಜೆಪಿಗೆ ಸೇರಿದ ಘಟನೆ ಭಾನುವಾರ ನಡೆದಿದೆ. ಅವರ ಸಹೋದರ ಪುತ್ತುಕ್ಕಿ ಶಶಿ ಬಿಜೆಪಿಗೆ ಸೇರಿದರು. ವಿವಿಧ ವಿಷಯಗಳ ಬಗ್ಗೆ ಸಿಪಿಎಂ ನಿಲುವನ್ನು ವಿರೋಧಿಸಿ ಅವರು ಬಿಜೆಪಿಗೆ ಸೇರಿದರು.
ಸದಸ್ಯತ್ವವನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ.ವಿ.ಪ್ರಕಾಶ್ ಬಾಬು ವಿತರಿಸಿದರು. ಕಣ್ಣೂರು ಜಿಲ್ಲಾ ಘಟಕದ ಫೇಸ್‍ಬುಕ್ ಪುಟದ ಮೂಲಕ ಪಕ್ಷಕ್ಕೆ ಶಶಿ ಸೇರ್ಪಡೆಗೊಂಡಿರುವುದಾಗಿ ಬಿಜೆಪಿ ಘೋಷಿಸಿದೆ.
ಫೇಸ್ಬುಕ್ ಪೆÇೀಸ್ಟ್:
ಸಿಪಿಎಂನ ಜೀವಂತ ಹುತಾತ್ಮ ಪುಷ್ಪನ್ ಅವರ ಸಹೋದರ ಮತ್ತು ಸಿಪಿಎಂ ಕಾರ್ಯಕರ್ತ ಶಶಿ ಅವರು ಬಿಜೆಪಿಗೆ ಸೇರಿದ್ದಾರೆ. ಕಣ್ಣೂರಿನ ಬಿಜೆಪಿ ತಲಶೇರಿ ಕ್ಷೇತ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸೇರ್ಪಡೆಗೊಂಡರು.
ಅವರ ಸಹೋದರ ಸಿಪಿಎಂಗೆ ರಾಜೀನಾಮೆ ನೀಡಿದ್ದು ಸಿಪಿಎಂನ ಎರಡು ಮಾನದಂಡಗಳನ್ನು ವಿರೋಧಿಸಿ ಬಿಜೆಪಿಗೆ ಸೇರಿರುವರು. ಪುಷ್ಪನ್ ಅವರ ಸಹೋದರ ಶಶಿ ಅವರು ಬಿಜೆಪಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಿರುವರು. ಇನ್ನಷ್ಟು ಜನರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದು ಮುಂದೆ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ.





