ಬದಿಯಡ್ಕ: ಮುಸ್ಲಿಂ ಲೀಗ್ ನ ದಲಿತ ವಿಭಾಗವಾದ ದಲಿತ ಲೀಗ್ ನೇತಾರರೂ, ಮುಸ್ಲಿಂ ಲೀಗ್ ನಿಂದ ಸ್ಪರ್ಧಿಸಿ ಕುಂಬ್ಡಾಜೆ ಗ್ರಾಮ ಪಂಚಾಯತಿಯ ಜನಪ್ರತಿನಿಧಿಯಾಗಿಯೂ ಆಗಿ ದುಡಿದ ಮಾರ್ಪನಡ್ಕದ ಸುಂದರ ಆರ್ಟಿಸ್ಟ್ ಬಿಜೆಪಿಗೆ ಸೇರ್ಪಡೆಗೊಂಡರು.
ದೇಶದ ಅಖಂಡತೆ, ದೇಶೀಯ ಚಿಂತನೆ, ಬಡವರ್ಗದ ಉದ್ದಾರ ಮೊದಲಾದ ಬಿಜೆಪಿಯ ಕಾರ್ಯವೈಕರ್ಯವೇ ನನ್ನನ್ನು ಬಿಜೆಪಿಗೆ ಸೇರಲು ಪ್ರೇರೇಪಿಸಿರುವುದಾಗಿ ಅವರು ನುಡಿದರು. ಮವ್ವಾರಿನ ಬಿಜೆಪಿ ಕಚೇರಿಯಲ್ಲಿ ನಡೆದ ಪಂಚಾಯತಿ ಮಟ್ಟದ ಸರಳ ಸಭೆಯಲ್ಲಿ ಇವರನ್ನು ಬಿಜೆಪಿ ಕೇರಳ ರಾಜ್ಯ ಸಮಿತಿ ಸದಸ್ಯ ಎಂ ಸಂಜೀವ ಶೆಟ್ಟಿ ಅವರು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಸಭೆಯಲ್ಲಿ ಬಿಜೆಪಿ ಪಂಚಾಯತಿ ಸಮಿತಿ ಅಧ್ಯಕ್ಷ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸಿದರು. ನೇತಾರರಾದ ಸುಧಾಮ ಗೋಸಾಡ, ಸುನಿಲ್ ಪಿ ಆರ್, ಸುಕುಮಾರ್ ಕುದ್ರೆಪ್ಪಾಡಿ, ಶಶಿಧರ ತೆಕ್ಕೆಮೂಲೆ ಮೊದಲಾದವರು ಉಪಸ್ಥಿತರಿದ್ದರು.





