ಮಂಜೇಶ್ವರ: ಮುಂದಿನ ದಿನಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ವರ್ಕಾಡಿ ಪಂಚಾಯತಿಯ ಪ್ರತಿ ವಾರ್ಡ್ ಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಪ್ರಯುಕ್ತ ಸುಂಕದಕಟ್ಟೆ ವಿಶ್ವಪ್ರಭಾ ಹಾಲ್ ನಲ್ಲಿ ವಾರ್ಡ್ ಪ್ರಮುಖರ ಅಭ್ಯಾಸ ವರ್ಗ ಭಾನುವಾರ ನಡೆಯಿತು.
ಕಾರ್ಯಕ್ರಮದ ಮೊದಲು ಹಿರಿಯರಾದ ದೂಮಪ್ಪ ಶೆಟ್ಟಿ ತಾಮಾರು ಧ್ವಜಾರೋಹಣ ನೆರವೇರಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅಭ್ಯಾಸ ವರ್ಗ ತರಗತಿಯನ್ನು ಉದ್ಘಾಟಿಸಿದರು. ಮುಂದಿನ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಕೊಡುಗೆ ನೀಡಬೇಕು ಎಂದು ಅವರು ಕರೆನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ ಅಭ್ಯಾಸ ವರ್ಗ ತರಗತಿಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ವರ್ಕಾಡಿ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ವಹಿಸಿದ್ದರು. ಅಭ್ಯಾಸ ವರ್ಗದ ಅಧ್ಯಕ್ಷ ಸ್ಥಾನವನ್ನು ಹರೀಶ್ ನಾಯ್ಕ್ ಪಾವೂರು ವಹಿಸಿದ್ದರು. ಬಿಜೆಪಿ ವರ್ಕಾಡಿ ಪಂಚಾಯತಿ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ ಚೇಂಡೇಲ್ ಸ್ವಾಗತಿಸಿ, ಸದಾಶಿವ ಯು ವಂದಿಸಿದರು.







