ಬದಿಯಡ್ಕ: ಬದಿಯಡ್ಕದ ಜನಪ್ರಿಯ ವೈದ್ಯಾಲಯವಾದ ಶ್ರೀನಿಧಿ ಕ್ಲಿನಿಕ್ ನಲ್ಲಿ ಇತ್ತೀಚೆಗೆ ಬ್ರಹ್ಮೈಕ್ಯರಾದ ಶ್ರೀಮದ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ ಭಾವಚಿತ್ರವನ್ನು ಶನಿವಾರ ಅನಾವರಣಗೊಳಿಸಲಾಯಿತು.
ನಿಯೋಜಿತ ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಅವರು ಭಾವಚಿತ್ರವನ್ನು ಅನಾವರಣಗೊಳಿಸಿದರು. ಡಾ.ಶ್ರೀನಿಧಿ ಸರಳಾಯ, ರವೀಶ ತಂತ್ರಿ ಕುಂಟಾರು, ರಾಜೇಂದ್ರ ಕಲ್ಲೂರಾಯ, ಸುಜಾತಾ ತಂತ್ರಿ, ಗೋಪಾಲಕೃಷ್ಣ ಭಟ್, ಉದಯ ಕಂಬಾರ್, ತೇಜಶ್ರೀ, ದೀಕ್ಷಿತ್ ಕುಮಾರ್, ಜ್ಯೋತಿ, ಪುಷ್ಪ, ಆಶಾಲತಾ, ರಾಮಮೋಹನ ಕೆದಿಲಾಯ, ದೇವದಾಸ ಕಾಮತ್, ರವೀಂದ್ರ ಕಾಮತ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.





