ಕೊಚ್ಚಿ: ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರ ಒಪ್ಪಿಗೆಯೊಂದಿಗೆ ಚಿನ್ನ ಕಳ್ಳಸಾಗಣೆ ಮಾಡಲಾಗಿದೆ ಎಂದು ಸ್ವಪ್ನಾ ಸುರೇಶ್ ಹೇಳಿಕೆ ನೀಡಿದ್ದು ಶಿವಶಂಕರ್ ಅವರಿಗೆ ಚಿನ್ನದ ಕಳ್ಳಸಾಗಣೆ ಬಗ್ಗೆ ಸ್ಪಷ್ಟ ಅರಿವಿದೆ ಎಂದು ಸ್ವಪ್ನಾ ಹೇಳಿಕೆ ನೀಡಿದ್ದಾರೆ.
ಶಿವಶಂಕರ್ ಅವರನ್ನು ವಶಕ್ಕೆ ಕೋರಿ ಕಸ್ಟಮ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಕಸ್ಟಡಿ ಅರ್ಜಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕಸ್ಟಮ್ಸ್ ಈ ಅರ್ಜಿಯನ್ನು ಸಲ್ಲಿಸಿದೆ.
ಸ್ವಪ್ನಾ ಸುರೇಶ್ ರಿಗೆ ಶಿವಶಂಕರ್ ಚಿನ್ನ ಕಳ್ಳಸಾಗಣೆಗೆ ಅನುಕೂಲ ಮಾಡಿಕೊಟ್ಟಿರುವರು. ಅಟ್ಟಿಕುಳಂಗೆರೆ ಜೈಲಿನಲ್ಲಿರುವ ಸ್ವಪ್ನಾಳನ್ನು ವಿಚಾರಣೆ ನಡೆಸುವಾಗ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದರ ಆಧಾರದ ಮೇಲೆ ಶಿವಶಂಕರ್ ಅವರನ್ನು ಬಂಧಿಸಲಾಯಿತು. ಶಿವಶಂಕರ್‍ಗೆ ಚಿನ್ನ ಸಾಗಾಣಿಕೆ ಬಗ್ಗೆ ಸ್ಪಷ್ಟ ಅರಿವಿದೆ ಎಂದು ಮನವರಿಕೆಯಾಗಿದೆ ಎಂದು ಈ ಹಿಂದೆ ಕಸ್ಟಮ್ಸ್ ಹೇಳಿತ್ತು.
ಶಿವಶಂಕರ್ ಅವರು ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿರಯುವುದು ಖಚಿತವಾಗಿದ್ದು ಇದರ ಜೊತೆಗೆ ಇವರಿಗೆ ಕೈಜೋಡಿಸಿದ ಇನ್ನಷ್ಟು ಜನರು ಭಾಗಿಯಾಗಿರುವ ಬಗ್ಗೆ ಶಿವಶಂಕರ್ ಅವರನ್ನು ಕಸ್ಟಡಿಯಲ್ಲಿ ಪ್ರಶ್ನಿಸಬೇಕು ಎಂದು ಕಸ್ಟಮ್ಸ್ ಅರ್ಜಿಯಲ್ಲಿ ತಿಳಿಸಲಾಗಿದೆ. ಕಸ್ಟಮ್ಸ್ ಕಸ್ಟಡಿ ಅರ್ಜಿಯನ್ನು ನ್ಯಾಯಾಲಯ ಇಂದು(ಬುಧವಾರ) ಪರಿಗಣಿಸಲಿದೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಕರಣವನ್ನು ಪರಿಗಣಿಸಲಿದೆ.


