ಕೋಝಿಕ್ಕೋಡ್: ತಮ್ಮ ಅಭಿಮಾನಿಗಳನ್ನು ಕಣ್ಣೀರಲ್ಲಿ ತೋಯಿಸಿದ ಪುಟ್ಬಾಲ್ ದ್ರುವತಾರೆ ಡಿಯಾಗೋ ಮರಡೋನಾ ಅವರ ಸ್ಮಾರಕವನ್ನು ಕೇರಳದಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಮುಖ ಉದ್ಯಮಿ ಬಾಬಿ ಚೆಮ್ಮನ್ನೂರ್ ಹೇಳಿರುವರು. ಮರಡೋನ ಎಂದೆಂದಿಗೂ ನೆನಪಿನಲ್ಲಿ ಉಳಿಯುವುದರಲ್ಲಿ ಸಂದೇಹವಿಲ್ಲ. ಫುಟ್ಬಾಲ್ ಮೈದಾನದಲ್ಲಿ ಅವರು ಪ್ರದರ್ಶಿಸಿದ ಮ್ಯಾಜಿಕ್ ಅವರನ್ನು ಅಮರನನ್ನಾಗಿ ಮಾಡುತ್ತದೆ. ಆದರೆ, ಕೇರಳದಲ್ಲಿ ವಿಶ್ವಪ್ರಸಿದ್ಧ ಸ್ಮಾರಕವನ್ನು ಸ್ಥಾಪಿಸಲು ಉದ್ದೇಶಿಸಿರುವೆ ಎಂದು ಬಾಬಿ ಚೆಮ್ಮನ್ನೂರ್ ತಿಳಿಸಿರುವರು.
ಮರಡೋನಾ ಕೇವಲ ಚೆಮ್ಮನ್ನೂರ್ ಇಂಟರ್‍ನ್ಯಾಷನಲ್‍ನ ಬ್ರಾಂಡ್ ಅಂಬಾಸಿಡರ್ ಮಾತ್ರವಲ್ಲ, ಅವರು ವೈಯಕ್ತಿಕವಾಗಿ ಬಾಬಿ ಅವರಿಗೆ ನಿಕಟರಾಗಿದ್ದವರು. ಪ್ರಸ್ತುತ ನಮ್ಮನ್ನಗಲಿದರೂ ಅಗೋಚರನಾಗಿ ಜಗತ್ತನ್ನು ನೋಡುತ್ತಾನೆ. ಕೇವಲ ಫುಟ್ಬಾಲ್ ಆಟಗಾರನಷ್ಟೇ ಅಲ್ಲದೆ ಉತ್ತಮ ಸ್ನೇಹಿತನೂ ಆಗಿದ್ದನೆಂದು ಬಾಬಿ ಚೆಮ್ಮನ್ನೂರ್ ಅವರು ಮರಡೋನಾ ಅವರನ್ನು ಉತ್ತಮ ಮನಸ್ಸಿನ ವ್ಯಕ್ತಿಯಾಗಿ ಆರಾಧನಾ ಭಾವದಿಂದ ಪ್ರೀತಿಯ ನುಡಿಗಳನ್ನಾಡಿದ್ದಾರೆ.
ಮರಡೋನಾ ತನ್ನ ಜೀವನದ ಸಂಧ್ಯಾಕಾಲವನ್ನು ಎಂದಿಗೂ ಹತಾಶೆಗೊಳಗಾಗದೆ ಕ್ರೀಡಾ ಮನೋಲ್ಲಾಸದಿಂದಲೇ ಕಳೆದವರು. ಹಣಕ್ಕಾಗಿ ದುರಾಸೆಪಟ್ಟವರಲ್ಲ. ಅವರು ಜಗತ್ತಿಗೆ ತಿಳಿದಿರುವ ಮರೆಯಲಾಗದ ಸ್ಮಾರಕವನ್ನು ಹೊಂದಿರಬೇಕು. ಮರಡೋನಾ ಮತ್ತು ಚಿನ್ನದ ಫುಟ್‍ಬಾಲ್‍ನಿಂದ ಮಾಡಿದ ಸ್ಮಾರಕದ ಕಲ್ಪನೆ ಮೊದಲು ಮನಸ್ಸಿಗೆ ಬಂದಿದೆ ಎಂದು ಬಾಬಿ ಹೇಳಿರುವರು.


