ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮಾದರಿ ನೀತಿಸಂಹಿತೆ ಪ್ರಕಾರ ಪ್ರಕೃತಿ ಸ್ನೇಹಿ ಸಾಮಾಗ್ರಿಗಳನ್ನು ಮಾತ್ರ ಬಳಸಬೇಕಿದೆ. ಈ ಬಾರಿ ನಡೆಯಲಿರುವುದು ಹಸುರು ಚುನಾವಣೆ.
ಚುನಾವಣೆ ಪ್ರಚಾರ ಚಟುವಟಿಕೆಗಳ ಅಂಗವಾಗಿ ರಾಶಿ ಬೀಳುವ ತ್ಯಾಜ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಕಡಿಮೆಗೊಳಿಸುವ ಮತ್ತು ಪ್ರಕೃತಿ ಸ್ನೇಹಿ ಸಾಮಾಗ್ರಿಗಳನ್ನು ಸಂಬಂಧಪಟ್ಟ ಎಲ್ಲ ಅಗತ್ಯಗಳಿಗೆ ಬಳಸುವ ನಿಟ್ಟಿನಲ್ಲಿ ಹಸುರು ಚುನಾವಣೆ ನಡೆಸಲಾಗುವುದು.
ಅನುಮತಿಯಿರುವ ಫಲಕಗಳು : ಪರಿಸರಕ್ಕೆ ಮಾರಕವಾದ
ಸಾಮಾಗ್ರಿಗಳನ್ನು ಬಳಸಿ ತಯಾರಿಸುವ ಫಲಕಗಳನ್ನು ನಿಷೇಧಿಸಲಾಗಿದೆ. ಫ್ಲೆಕ್ಸ್ ಇತ್ಯಾದಿಗಳಿಗೆ ಬದಲಾಗಿ ಹತ್ತಿಯ ಬಟ್ಟೆಯಲ್ಲಿ ಬರೆಯಲಾದ ಫಲಕಗಳು, ಹತ್ತಿ ಬಟ್ಟೆ, ಕಾಗದ ಬಳಸಿರುವ ಮೀಡಿಯಂ ಬಳಸಿ ಮುದ್ರಿಸಲಾದ ಫಲಕಗಳು ಇತ್ಯಾದಿಗಳಿಗೆ ಅನುಮತಿಯಿದೆ. ತೆಂಗಿನ ಮಡಲು, ಹುಲ್ಲುಚಾಪೆ, ಬಿದಿರು, ಹಾಳೆ ಇತ್ಯಾದಿ ಪರಿಸರ ಸ್ನೇಹಿ ಸಾಮಾಗ್ರಿಗಳನ್ನು ಬಳಸಿ ಫಲಕಗಳನ್ನು ಸಿದ್ಧಪಡಿಸಬಹುದು. ಪ್ರತ್ಯೇಕ ಅನುಮತಿ ಹೊಂದಿರುವ ಪ್ರದೇಶಗಳಲ್ಲಿ ಡಿಜಿಟಲ್ ಬೋರ್ಡ್‍ಗಳನ್ನು ಸ್ಥಾಪಿಸಬಹುದಾಗಿದೆ. ಧ್ವಜ, ತೋರಣ, ಇತ್ಯಾದಿಗಳ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಮಿಶ್ರಿತ ಬಟ್ಟೆಗಳನ್ನು ಕೈಬಿಡಬೇಕು. ನಾನ್ ವೂವಲ್ ಪಾಲಿಪೆÇ್ರಪಲಿನ್ ಎಂಬ ವಸ್ತು ಪ್ಲಾಸ್ಟಿಕ್ ಆಗಿದೆ. ನೇರನೋಟಕ್ಕೆ ಬಟ್ಟೆಯಂತೆ ಕಾಣುವುದಾದರೂ ಅದನ್ನು ನಿಷೇಧಿಸಲಾಗಿದೆ.


