ಮಂಜೇಶ್ವರ: ಇಲ್ಲಿನ ಎಸ್.ಎ.ಟಿ. ವಿದ್ಯಾ ಸಂಸ್ಥೆಯಲ್ಲಿ ಸುಮಾರು 20 ವರ್ಷಗಳ ಕಾಲ ಅಧ್ಯಾಪನ ಸೇವೆಗೈದು 2019-20ನೇ ಶೈಕ್ಷಣಿಕ ವಷಾರ್ಂತ್ಯದಲ್ಲಿ ಸೇವೆಯಿಂದ ನಿವೃತ್ತರಾದ ಜಿ. ವೀರೇಶ್ವರ ಭಟ್ ಕರ್ಮರ್ಕರ್ ಅವರಿಗೆ ಶಾಲಾ ವತಿಯಿಂದ ಆತ್ಮೀಯ ವಿದಾಯ ನೀಡಲಾಯಿತು.
ಶಾಲಾ ಪ್ರಾಂಶುಪಾಲ ಮುರಳಿ ಕೃಷ್ಣ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಫರೀದ್ ಎಂ. ಪಿ., ಎಸ್. ಎ. ಟಿ
ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ತೇಜಸ್ ಕಿರಣ್ ಉಪಸ್ಥಿತರಿದ್ದರು. ಅಧ್ಯಾಪಕರಾದ ಎನ್. ಜಿ. ಹೆಗ್ದೆ, ಶಾಮ್ ಕೃಷ್ಣಪ್ರಕಾಶ್, ದಾಸಪ್ಪ ರೈ, ಈಶ್ವರ್ ಕಿದೂರು, ಸುಕನ್ಯಾ ಟೀಚರ್, ಆರತಿ ಟೀಚರ್ ಮತ್ತಿತರರು ಒಡನಾಟದ ಅನುಭವವನ್ನು ಹಂಚಿಕೊಂಡರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ವೀರೇಶ್ವರ ಭಟ್ ಅವರು ತನ್ನ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಮತ್ತು ಸೇವಾ ಅವಧಿಯ
ಅವಿಸ್ಮರಣೀಯ ಸನ್ನಿವೇಶಗಳನ್ನು ಹಂಚಿಕೊಂಡರು.
ಪ್ರೌಢಶಾಲಾ ವಿಭಾಗದ ಎಸ್. ಆರ್. ಜಿ. ಕನ್ವೀನರ್ ಎನ್. ಜಿ .ಹೆಗ್ಡೆ, ಸ್ವಾಗತಿಸಿ, ಶಾರೀರಿಕ ಶಿಕ್ಷಕ ಶ್ಯಾಮ್ ಕೃಷ್ಣ ಪ್ರಕಾಶ್ ವಂದಿಸಿದರು. ಈಶ್ವರ್ ಕಿದೂರು ಕಾರ್ಯಕ್ರಮ ನಿರೂಪಿಸಿದರು.


