ತಿರುವನಂತಪುರ: ರಾಜ್ಯ ಪೋಲೀಸ್ ಮಹಾ ನಿರ್ದೇಶಕ ಪಿ.ವಿಜಯನ್ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ರಚಿಸಿದ್ದಕ್ಕಾಗಿ 17 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಖಾತೆಯಿಂದ ಹಣ ಸುಲಿಗೆ ಮಾಡಲು ಯತ್ನಿಸಿದ್ದ ರಾಜಸ್ಥಾನದ 17 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
' ತನ್ನ ನಕಲಿ ಫೇಸ್‍ಬುಕ್ ಖಾತೆ ಐಡಿ ರಚಿಸಿದ್ದರ ಬಗ್ಗೆ ಪೆÇಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಈ ಹಿಂದೆ ಐಜಿ ಹೇಳಿದ್ದರು. ತಾನು ಯಾರಿಗೂ ಸ್ನೇಹದ ವಿನಂತಿಯನ್ನು ಕಳುಹಿಸುವುದಿಲ್ಲ ಮತ್ತು ಅಂತಹ ನಕಲಿ ಐಡಿಗಳಿಂದ ವಿನಂತಿಗಳನ್ನು ಸ್ವೀಕರಿಸಬಾರದೆಂದು ಅವರು ಎಚ್ಚರಿಸಿದ್ದರು.
ಉತ್ತರ ಭಾರತದ ದೊಡ್ಡ ಗ್ಯಾಂಗ್‍ನಿಂದ ಪೆÇಲೀಸ್ ಅಧಿಕಾರಿಯ ನಕಲಿ ಫೇಸ್‍ಬುಕ್ ಖಾತೆಯ ಮೂಲಕ ಹಣವನ್ನು ಲಾಂಡರ್ ಮಾಡಲಾಗಿದೆ ಎಂದು ತನಿಖಾ ತಂಡ ಕಂಡುಹಿಡಿದಿದೆ. ಅವರು ನಕಲಿ ವಿಳಾಸವನ್ನು ಬಳಸಿಕೊಂಡು ಫೇಸ್ಬುಕ್ ಖಾತೆಯನ್ನು ಪ್ರಾರಂಭಿಸಿದ್ದರು.
ಈ ಉದ್ದೇಶಕ್ಕಾಗಿ ತಂಡವು ಹಲವಾರು ಮೊಬೈಲ್ ಫೆÇೀನ್‍ಗಳನ್ನು ಬಳಸಿದೆ. ಒಂದು ಮೊಬೈಲ್ ರಾಜಸ್ಥಾನದ ಭಾರತ್ಪುರದಲ್ಲಿದೆ ಮತ್ತು ಇನ್ನೊಂದು ಮೊಬೈಲ್ ಹರಿಯಾಣದಲ್ಲಿ ಪತ್ತೆಯಾಯಿತು. ಸೈಬರ್ ಅಪರಾಧ ಪೆÇಲೀಸರು ವಿವಿಧ ಸ್ಥಳಗಳಲ್ಲಿ ವಿಳಾಸಗಳನ್ನು ಪತ್ತೆಹಚ್ಚಿ ವಂಚನೆಯನ್ನು ಬಯಲಿಗೆಳೆಯಿತು.


