ತಿರುವನಂತಪುರ: ಕೇರಳದಲ್ಲಿ ಇನ್ನು ನೂತನ ವಿದ್ಯುತ್ ಸಂಪರ್ಕ ಲಭಿಸಲು ಸುಲಲಿತ ಮಾರ್ಗಗಳನ್ನು ವಿದ್ಯುತ್ ಬೋರ್ಡ್ ವ್ಯವಸ್ಥೆಗೊಳಿಸಲಿದೆ. ಸಂಪರ್ಕವನ್ನು ಪಡೆಯಲು ಕಾರ್ಯವಿಧಾನಗಳನ್ನು ಸುಗಮಗೊಳಿಸಲು ಕೆಎಸ್‍ಇಬಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಯಾವುದೇ ರೀತಿಯ ಸಂಪರ್ಕವನ್ನು ಪಡೆಯಲು ಅಪ್ಲಿಕೇಶನ್‍ನೊಂದಿಗೆ ಎರಡು ದಾಖಲೆಗಳು ಸಾಕಾಗಲಿದೆ.
ವಿದ್ಯುತ್ ಸಂಪರ್ಕವನ್ನು ಪಡೆಯಬೇಕಾದ ಸ್ಥಳದಲ್ಲಿ ಅರ್ಜಿದಾರರ ಗುರುತಿನ ದಾಖಲೆ ಮತ್ತು ಅರ್ಜಿದಾರರ ಕಾನೂನುಬದ್ಧ ಹಕ್ಕಿನ ಪುರಾವೆ ಎರಡೂ ಇದ್ದರೆ ಸಂಪರ್ಕವನ್ನು ಒದಗಿಸಲು ಸಾಧ್ಯವಾಗಲಿದೆ. ಸಂಪರ್ಕ ಪಡೆಯಲು ಅಪ್ಲಿಕೇಶನ್‍ನೊಂದಿಗೆ ಒದಗಿಸಲಾದ ಗುರುತಿನ ದಾಖಲೆಯ ವಿಳಾಸ ಮತ್ತು ಸಂಪರ್ಕವನ್ನು ಮಾಡಲು ಉದ್ದೇಶಿಸಿರುವ ಸ್ಥಳ ಒಂದೇ ಆಗಿದ್ದರೆ, ಸ್ಥಳದ ಕಾನೂನುಬದ್ಧ ಹಕ್ಕನ್ನು ಸಾಬೀತುಪಡಿಸಲು ಇತರ ದಾಖಲೆಗಳನ್ನು ಬಳಸಬಹುದು.
ಸ್ಥಳೀಯಾಡಳಿತ ಸಂಸ್ಥೆ ನೀಡುವ ಯಾವುದೇ ನಿವಾಸ ಪ್ರಮಾಣಪತ್ರ, ಚುನಾವಣಾ ಕಾರ್ಡ್, ಪಾಸ್‍ಪೆÇೀರ್ಟ್, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನ್ನು ಬಳಸಬಹುದು.


