ಕಾಸರಗೋಡು: ಚೆಮ್ನಾಡು ಗ್ರಾಮ ಪಂಚಾಯತ್‍ನ 10ನೇ ವಾರ್ಡ್ ಪೆÇಯಿನಾಚಿಯಿಂದ ಮುಸ್ಲಿಂಲೀಗ್ ಸಹೋದರಿಯರು ಸಹಿತ ವಿವಿಧ ರಾಜಕೀಯ ಪಕ್ಷಗಳಿಗೆ ರಾಜೀನಾಮೆ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ನರೇಂದ್ರ ಮೋದಿಯವರ ಜನಪರ ಹಾಗೂ ಅಭಿವೃದ್ಧಿಪರ ಯೋಜನೆಗಳನ್ನು ಬೆಂಬಲಿಸಿ ವಿವಿಧ ರಾಜಕೀಯ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡರು.
ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಶಾಲು ಹೊದಿಸಿ ಸ್ವಾಗತಿಸಿದರು. ಜಿಲ್ಲಾ ಸೆಲ್ ಕೋ ಓರ್ಡಿನೇಟರ್ ಎನ್.ಬಾಬುರಾಜ್, ಉದುಮ ಮಂಡಲ ಅಧ್ಯಕ್ಷ ಕೆ.ಟಿ.ಪುರುಷೋತ್ತಮನ್, ಮಂಡಲ ಉಪಾಧ್ಯಕ್ಷ ಎಂ.ಸದಾಶಿವನ್, ಸುರೇಶ್‍ಬಾಬು ಪೆÇಯಿನಾಚಿ, ಕಾತ್ರ್ಯಾಯಿನಿ, ಜಯಚಂದ್ರನ್ ಸನ್ನಿದಾನಂ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದರು.

