ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಏಕೀಕರಣ ಉದ್ದೇಶದಿಂದ ರಾಜ್ಯ ಚುನಾವಣೆ ಆಯೋಗ ರಚಿಸಿರುವ ಪೋಲ್ ಮೆನೇಜರ್ ಆ್ಯಪ್ ಸಂಬಂಧ ಜಿಲ್ಲಾ-ಬ್ಲಾಕ್ ಮಟ್ಟದ ಮಾಸ್ಟರ್ ತರಬೇತುದಾರರಿಗೆ ತರಬೇತಿ ನಡೆಯಿತು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಚುನಾವಣೆ ವಿಭಾಗ ಸಹಾಯಕ ಜಿಲ್ಲಾ„ಕಾರಿ ಎ.ಕೆ.ರಮೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಇನಾರ್ಮೇಶನ್ ಅಧಿಕಾರಿ ರಾಜನ್ ಕೆ, ಜ್ಯೂನಿಯರ್ ವರಿಷ್ಠಾಧಿಕಾರಿಗಳಾದ ಜಿ.ಸುರೇಶ್ ಬಾಬು, ಝುಬೈರ್ ಎಲ್.ಕೆ., ಸಹಾಯಕ ಇನಾರ್ಮೆಟಿಕ್ ಅಧಿಕಾರಿ ಕೆ.ಲೀನಾ ತರಗತಿ ನಡೆಸಿದರು.

