ಕಾಸರಗೋಡು: ಕೆಎಸ್‍ಆರ್‍ಟಿಸಿ ಕಣ್ಣೂರು - ಕಾಸರಗೋಡು ಟೌನ್ ಟು ಟೌನ್ ಬಸ್ ಸಂಚಾರ ಸಂಖ್ಯೆಯನ್ನು ಹೆಚ್ಚಿಸಲು ಯೋಚಿಸಿದೆ.
ದಿನಕ್ಕೆ ಒಂದು ಟ್ರಿಪ್ ಎಂಬುದನ್ನು ಮುಂದಿನ ವಾರದಿಂದ ಎರಡಾಗಿ ಹೆಚ್ಚಿಸಲಿದೆ. ಬೆಳಗ್ಗೆ 5.20 ರಿಂದ ಸಂಜೆ 3.50 ರ ವರೆಗೆ ಕಣ್ಣೂರು ಡಿಪೆÇೀದಿಂದ ಕಾಸರಗೋಡಿಗೆ ಪ್ರತಿದಿನ 18 ಸರ್ವೀಸ್‍ಗಳಿವೆ. ಕೋವಿಡ್ 19 ರ ಹಿನ್ನೆಲೆಯಲ್ಲಿ ಒಂದು ಟ್ರಿಪ್ ಮಾತ್ರವೇ ಇದೆ. ತಲಶ್ಶೇರಿ-ಮೈಸೂರು ಸೇವೆ ಪುನರಾರಂಭಿಸಲಿದೆ. ಬೆಳಗ್ಗೆ 6.45 ಕ್ಕೆ ತಲಶ್ಶೇರಿ - ತೊಟ್ಟಿನ್‍ಪಾಲಂ - ಮಾನಂತವಾಡಿ - ಮೈಸೂರು, 8.20 ಕ್ಕೆ ತಲಶ್ಶೇರಿ - ಪಾನೂರು - ಕೂತುಪರಂಬ - ವಿರಾಜ್‍ಪೇಟೆ - ಗೋಣಿಕೊಪ್ಪ - ಮೈಸೂರು ಸರ್ವೀಸ್‍ಗಳನ್ನು ಆರಂಭಿಸಲಿದೆ.
ಕಣ್ಣೂರು ಡಿಪೆÇೀದಿಂದ ಇರಿಟ್ಟಿಗೆ ಸಂಚರಿಸುವ ಬಸ್‍ಗಳ ಟ್ರಿಪ್‍ನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ. ಕಣ್ಣೂರಿನಿಂದ ಅಂತಾರಾಜ್ಯ ಸರ್ವೀಸ್‍ಗಳನ್ನು ಮುಂದಿನ ವಾರದಿಂದ ಪುನರಾರಂಭಿಸಲಾಗುವುದು.


