ಕುಂಬಳೆ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್‍ನ ಉಪ್ಪಳ, ಕುಂಬಳೆ, ಬದಿಯಡ್ಕ ಘಟಕಗಳನ್ನೊಳಗೊಂಡ ಕುಂಬಳೆ ವಲಯದ ಪ್ರಥಮ ಸಮ್ಮೇಳನವು ಕುಂಬಳೆ ಭಗೀರಥಿ ಕಾಂಪ್ಲೆಕ್ಸ್‍ನಲ್ಲಿ ಸೋಮವಾರ ಜರಗಿತು.
ಕುಂಬಳೆ ವಲಯ ಅಧ್ಯಕ್ಷ ವೇಣು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಹರೀಶ್ ಪಾಲಕುನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಕೋವಿಡ್ ವಿರುದ್ಧ ಹೋರಾಡಿದ ವೈದ್ಯರಲ್ಲೋರ್ವರಾದ ಡಾ. ಸುಬ್ಬಾ ಗಟ್ಟಿಯವರನ್ನು ಸನ್ಮಾನಿಸಲಾಯಿತು. ಹಿರಿಯ ಛಾಯಾಗ್ರಾಹಕ ಶ್ರೀಕೃಷ್ಣ ಭಟ್ ಅನುಪಮಾ ಸ್ಟುಡಿಯೋ ಪೆರ್ಲ, ವೇಣು ಕಲಾ ಸ್ಟುಡಿಯೋ ಕುಂಬಳೆ, ಸದಾಶಿವ ಕುಲಾಲ್ ಉಪ್ಪಳ ಇವರನ್ನು ಸಂಘಟನೆಯ ವತಿಯಿಂದ ಗೌರವಿಸಲಾಯಿತು. ಕುಂಬಳೆ ವಲಯ ಕಾರ್ಯದರ್ಶಿ ರಾಮಚಂದ್ರ ವರದಿ ಹಾಗೂ ಕೋಶಾಧಿಕಾರಿ ವಿಜಯನ್ ಲೆಕ್ಕಪತ್ರ ಮಂಡಿಸಿದರು. ರಾಜ್ಯ ಸಮಿತಿಯ ಸದಸ್ಯ ಎನ್.ಎ.ಭರತನ್, ಜಿಲ್ಲಾ ಕಾರ್ಯದರ್ಶಿ ಶ್ರೀಜಿತ್ ನಿಲಾಯಿ, ಜಿಲ್ಲಾ ಕೋಶಾಧಿಕಾರಿ ಮನೋಹರನ್ ಶುಭಹಾರೈಸಿದರು. ಕುಂಬಳೆ ವಲಯ ನೂತನ ಸಮಿತಿಯಲ್ಲಿ ಅಧ್ಯಕ್ಷರಾಗಿ ವೇಣು, ಉಪಾಧ್ಯಕ್ಷರಾಗಿ ಅಪ್ಪಣ್ಣ, ಕಾರ್ಯದರ್ಶಿ ರಾಮಚಂದ್ರ, ಜೊತೆಕಾರ್ಯದರ್ಶಿ ಉದಯ ಕಂಬಾರು, ಕೋಶಾಧಿಕಾರಿಯಾಗಿ ವಿಜಯನ್ ಕೆ.ನಾಯರ್, ಜಿಲ್ಲಾಸಮಿತಿಗೆ ಝಿಯಾದ್, ಸುದರ್ಶನ್, ಸುರೇಶ್ ಆಚಾರ್ಯ, ಸುನಿಲ್ ಕುಮಾರ್ ಅವರು ಪುನರಾಯ್ಕೆಗೊಂಡರು. ಸುರೇಶ್ ಆಚಾರ್ಯ ಪ್ರಾರ್ಥನೆ ಹಾಡಿದರು. ಸುನಿಲ್ ಕುಮಾರ್ ವಂದಿಸಿದರು.


