ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿನ 10 ನೇ ಇಚ್ಲಂಪಾಡಿ ವಾರ್ಡಿನ ಚುನಾವಣಾ ಸಭೆಯಲ್ಲಿ ವಿವಿಧ ಪಕ್ಷಗಳ ಸಕ್ರಿಯ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿಕೊಂಡು ತಮ್ಮ ಕುಟುಂಬ ಸಮೇತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಇವರಿಗೆ ಭಾರತೀಯ ಜನತಾ ಪಕ್ಷದ ಕೇರಳ ರಾಜ್ಯ ಕೌನ್ಸಿಲ್ ಸಮಿತಿ ಸದಸ್ಯ ಸತ್ಯಶಂಕರ ಭಟ್ ಮತ್ತು ಇತರ ಮುಖಂಡರು ಪಕ್ಷದ ಧ್ವಜ ಮತ್ತು ಶಾಲು ಹೊದಿಸಿ ಆತ್ಮೀಯವಾಗಿ ರಾಷ್ಟ್ರೀಯ ಪಕ್ಷಕ್ಕೆ ಬರಮಾಡಿಕೊಂಡರು.
ಸಭೆಯಲ್ಲಿ ಬ್ಲಾಕ್ ಪಂಚಾಯತಿನ ಸದಸ್ಯ ಸತ್ಯಶಂಕರ ಭಟ್ ಮತ್ತು ಗ್ರಾಮ ಪಂಚಾಯತಿ ಸದಸ್ಯ ಹರೀಶ್ ಗಟ್ಟಿ ಅವರನ್ನು ಇಚ್ಲಂಪಾಡಿ ವಾರ್ಡು ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.


