ನವದೆಹಲಿ: ಸಾಫ್ಟ್‍ವೇರ್ ನವೀಕರಣದಿಂದಾಗಿ ಫೆ 27 ರಿಂದ ಎರಡು ದಿನಗಳವರೆಗೆ ದೇಶದಲ್ಲಿ ಕೋವಿಡ್-19 ಲಸಿಕೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಇಂದು ಮತ್ತು ನಾಳೆ(ಭಾನುವಾರ)(27 ಮತ್ತು 28 ಫೆಬ್ರವರಿ), ಕೋ-ವಿನ್ ಡಿಜಿಟಲ್ ಪ್ಲಾಟ್‍ಫಾರ್ಮ್ ಕೋ-ವಿನ್ 1.0 ರಿಂದ ಕೋ-ವಿನ್ 2.0 ಗೆ ಪರಿವರ್ತನೆಯಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಈ ಎರಡರಲ್ಲಿ ಕೋವಿಡ್ 19 ಲಸಿಕೆ ಸೆಷನ್‍ಗಳನ್ನು ನಿಗದಿಪಡಿಸಲಾಗುವುದಿಲ್ಲ " ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.



