ತಿರುವನಂತಪುರ: ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಣ್ಣೂರು ಜಿಲ್ಲೆಯ ಧರ್ಮದಾಮ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ತಮ್ಮ ಒಟ್ಟಾರೇ ಆಸ್ತಿ ಮೌಲ್ಯ 54 ಲಕ್ಷವೆಂದು ಘೋಷಿಸಿಕೊಂಡಿದ್ದಾರೆ.
ಸೋಮವಾರ ನಾಮಪತ್ರ ಸಲ್ಲಿಸಿದ್ದ ವಿಜಯನ್, ಮನೆ, ಎರಡು ಫ್ಲಾಟ್ ಸೇರಿದಂತೆ 51.95 ಲಕ್ಷ ಮೊತ್ತದ ಸ್ಥಿರಾಸ್ತಿ ಹಾಗೂ ಥಲಾಸೆರಿ ಶಾಖೆಯ ಎಸ್ ಬಿಐ ಬ್ಯಾಂಕ್ ಖಾತೆಯಲ್ಲಿ 78, 048, 51 ನಗದು, ಮಲಯಾಳಂ ಕಮ್ಯೂನಿಕೇಷನ್ ಲಿಮಿಟೆಡ್ ನಲ್ಲಿ 10 ಸಾವಿರ ಮೊತ್ತದ 1 ಸಾವಿರ ಷೇರುಗಳು, ಕೆಐಎಎಲ್ ನಲ್ಲಿ 1 ಲಕ್ಷ ರೂ. ಮೊತ್ತದ ಷೇರು ಸೇರಿದಂತೆ 2.04 ಲಕ್ಷ ಮೊತ್ತದ ಚರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.
2020-21ರಲ್ಲಿ ತಮ್ಮ ಒಟ್ಟಾರೇ ಆದಾಯವನ್ನು 2. 87,860 ರೂ. ಎಂದು ಅಫಿಡವಿಟ್ ನಲ್ಲಿ ತೋರಿಸಿದ್ದಾರೆ. ಆಕೆಯ ಪತ್ನಿ ಕಮಲಾ ಥಲಾಸೆರಿ ಶಾಖೆಯ ಎಸ್ ಬಿಐ ಬ್ಯಾಂಕ್ ಖಾತೆಯಲ್ಲಿ 5, 47, 803,21 ರೂ ನಗದು ಹೊಂದಿದ್ದು, ಒಟ್ಟಾರೇ 35 ಲಕ್ಷ ಮೊತ್ತದ ಆಸ್ತಿ ಹೊಂದಿದ್ದಾರೆ. ತಮ್ಮ ವಿರುದ್ಧದ ಎರಡು ಕೇಸ್ ಗಳ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಬಾಕಿ ಇರುವುದಾಗಿ ಪಿಣರಾಯ್ ವಿಜಯನ್ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.




