HEALTH TIPS

ರಾಜ್ಯದ ಮತದಾರರ ಪಟ್ಟಿಯಲ್ಲಿ ಅಕ್ರಮಗಳಿರುವುದು ಸತ್ಯ: ಮುಖ್ಯ ಚುನಾವಣಾಧಿಕಾರಿ ಟೀಕಾರಾಂ ಮೀನಾ

         ತಿರುವನಂತಪುರ: ರಾಜ್ಯದ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ಕಂಡುಬಂದಿವೆ ಎಂದು ಮುಖ್ಯ ಚುನಾವಣಾಧಿಕಾರಿ ಟೀಕಾರಂ ಮೀನಾ ಹೇಳಿದ್ದಾರೆ. ಕೊಟ್ಟಾಯಂ, ಪಾಲಕ್ಕಾಡ್, ಕೋಝಿಕ್ಕೋಡ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಎರಡೆರಡು ಮತಗಳ ಅಕ್ರಮಗಳು ಕಂಡುಬಂದಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಸಲಾಗುವುದು ಎಂದರು.

          ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ನೀಡಿದ ದೂರನ್ನು ಮುಖ್ಯ ಚುನಾವಣಾಧಿಕಾರಿ ಖಚಿತಪಡಿಸಿದ್ದಾರೆ. ಪಾಲಕ್ಕಾಡ್ ನಲ್ಲಿ 800 ದ್ವಿಗುಣ ಮತಗಳು ಕಂಡುಬಂದಿದೆ.  ಉಳಿದಂತೆ ವೈಕ್ಕಂ -590, ಚಾಲಕ್ಕುಡಿ -570 ಮತ್ತು ಇಡುಕ್ಕಿ -343 ಎಂಬಂತೆ ದ್ವಿಗುಣ ಮತಗಳಿರುವುದನ್ನು ಪತ್ತೆಹಚ್ಚಲಾಗಿದೆ. ಜೊತೆಗೆ ಈ ರೀತಿಯ ದ್ವಿಗುಣಗೊಳಿಸಿದ ಮತಪಟ್ಟಿಯ ಹೆಸರುಗಳಿರುವುದು ಇದೇ ಮೊದಲಲ್ಲ ಎಂದು ಟೀಕಾರಾಂ ಮೀನಾ ಹೇಳಿದರು. ಭಾರತದಾದ್ಯಂತ 26 ಲಕ್ಷ ದ್ವಿ ಮತಗಳಿವೆ ಎಂದರು. 

        91,60,601 ಮಂದಿ ಹೊಸ ಮತದಾರರ ಅರ್ಜಿಗಳನ್ನು ಸ್ವೀಕರಿಸಲಾಗಿದೆ. 7,39,905 ಜನರನ್ನು ಸೇರಿಸಲಾಗಿದೆ. 1,76,696 ಜನರನ್ನು ಹೊರಗಿಡಲಾಗಿದೆ. ಒಟ್ಟು ಮತದಾರರ ಸಂಖ್ಯೆ 2,74,46,039 ಆಗಿದೆ. ಮತದಾನಕ್ಕೆ 72 ಗಂಟೆಗಳ ಮೊದಲು ಬೈಕ್ ರ್ಯಾಲಿ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಟೀಕಾರಾಂ ಮೀನಾ ಹೇಳಿದ್ದಾರೆ.

       ಉದುಮದಲ್ಲಿ ಒಬ್ಬ ವ್ಯಕ್ತಿಗೆ ನಾಲ್ಕು ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಘಟನೆಯಲ್ಲಿ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಉದುಮದ ಎಇಒ ಅವರನ್ನು ಈ ಸಂಬಂಧ ಅಮಾನತುಗೊಳಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries