ಕಾಸರಗೋಡು: ವಿಶ್ವ ಕ್ಷಯರೋಗ ದಿನಾಚರಣೆಯ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಬುಧವಾರ ಜರುಗಿತು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆದ ಸಮಾರಂಭವನ್ನು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಉದ್ಘಾಟಿಸಿದರು. ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ರಾಜಾರಾಂ ಕೆ.ಕೆ. ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸರಕಾರಿ ಆಯುರ್ವೇದ ಆಸ್ಪತ್ರೆ ಪ್ರಧಾನ ವೈದ್ಯಾಧಿಕಾರಿ ಡಾ.ಟಿ.ಕೆ.ವಿಜಯಕುಮಾರ್, ಮಧೂರು ಸರಕಾರಿ ಹೋಮಿಯೋ ವೈದ್ಯಾಧಿಕಾರಿ ಡಾ.ಆಶಾ ಮೇರಿಸಿ.ಎಸ್., ಎ.ಆರ್.ಟಿ. ನೋಡೆಲ್ ಅಧಿಕಾರಿ ಡಾ.ಕೃಷ್ಣ ನಾಯ್ಕ್, ಜಿಲ್ಲಾ ಐ.ಎಂ.ಎ. ಅಧ್ಯಕ್ಷ ಡಾ.ನಾರಾಯಣ ನಾಯ್ಕ್, ಜಿಲ್ಲಾ ಟಿ.ಬಿ. ಕಚೇರಿ ಕನ್ಸಲ್ಟೆಂಟ್ ಡಾ.ನಾರಾಯಣ ಪ್ರದೀಪ್ ಪಿ. ಉಪಸ್ಥಿತರಿದ್ದರು. ಜಿಲ್ಲಾ ಟಿ.ಬಿ.ಅಧಿಕಾರಿ ಡಾ.ಆಮಿನಾ ಟಿ.ಪಿ.ಸ್ವಾಗತಿಸಿದರು. ಜಿಲ್ಲಾ ಎಜ್ಯುಕೇಶನ್ ಆಂಡ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ವಂದಿಸಿದರು.
ಜಿಲ್ಲಾ ಮೆಡಿಕಲ್ ಆಪೀಸ್, ರಾಷ್ಟರೀಯ ಆರೋಗ್ಯ ದೌತ್ಯ, ಜಿಲ್ಲಾ ಟಿ.ಬಿ.ಸೆಂಟರ್ ಜಂಟಿಯಾಗಿ ಸಿದ್ಧಪಡಿಸಿರುವ ಜನಜಾಗೃತಿ ವೀಡಿಯೋವನ್ನು ರಾಷ್ಟ್ರೀಯ ಆರೋಗ್ಯ ದೌತ್ಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ರಾಮನ್ ಸ್ವಾತಿ ವಾಮನ್ ಬಿಡುಗಡೆಗೊಳಿಸಿದರು.
ಜನಜಾಗೃತಿ ವಿಚಾರಸಂಕಿರಣ ಜರುಗಿದ್ದು, ಜಿಲ್ಲಾ ಟಿ.ಬಿ.ಅಧಿಕಾರಿ ಡಾ.ಆಮಿನಾ ಟಿ.ಪಿ. ತರಗತಿ ನಡೆಸಿದರು. ಕ್ಷಯರೋಗ ನಿವಾರಣೆ ಚಟುಚವಟಿಕೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಡಾ.ನಾರಾಯಣ ಪ್ರದೀಪ್ ಪಿ., ಬಿಂದು ಆರ್. ಅವರನ್ನು ಅಭಿನಂದಿಸಲಾಯಿತು. ಕಾಸರಗೋಡು ಬಸ್ ನಿಲ್ದಾಣ ಬಳಿ ಮಾಸ್ಕ್ ಸೆಲ್ಫಿ ಅಭಿಯಾನ ಜರುಗಿತು. ಕಾಸರಗೋಡು ಜನರಲ್ ಆಸ್ಪತ್ರೆಯಿಂದ ತ್ರಿಕರಿಪುರ ವರೆಗೆ ಸೈಕಲ್ ರಾಲಿ ನಡೆಯಿತು.




