ಕಾಸರಗೋಡು: ವಿಧಾನಸಭೆ ಚುನಾವಣೆ ಅಂಗವಾಗಿ ಅಭ್ಯರ್ಥಿಗಳ ಪ್ರಚಾರರಾರ್ಥ ಸಾರ್ವಜನಿಕ ಸಭೆಗಗಳು, ಪಂಚಾಯಿತಿ, ನಗರಸಭೆ ಗಳಲ್ಲಿ ಮಂಜೂರು ಮಾಡಿರುವ ಮೈದಾನಗಳಲ್ಲಿ ಮಾತ್ರ ಸಭೆ ನಡೆಸಲು ಅನುಮತಿಯಿರಲಿದೆ. ಕಾರ್ನರ್ ಸಬೆಗಳಿಗೆ ಅನುಮತಿ ನಿರಾಕರಿಸಲಾಗಿದೆ. ಚುನವಣಾ ಆಯೋಗ ವಿವಿಧ ಕೇಂದ್ರಗಳಲ್ಲಿ ಮಂಜೂರುಗೊಳಿಸಿರುವ ಮೈದಾನಗಳ ವಿವರ ಈ ರೀತಿಯಿದೆ.
ಮಂಜೇಶ್ವರ ಕ್ಷೇತ್ರದಲ್ಲಿ ಮಂಗಲ್ಪಾಡಿ -ಮಣ್ಣಂಕುಳಿ ಮೈದಾನ, ವರ್ಕಾಡಿ - ಸಂತ ಜಾಸೆಫ್ ಶಾಲೆ ಮಜೀರ್ ಪಳ್ಳ ಮೈದಾನ, ಮೀಂಜ-ಮೀಯಪದವು ವಿದ್ಯಾವರ್ದಕ ಶಾಲೆ ಮೈದಾನ, ಎಣ್ಮಕಜೆ- ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ, ಪುತ್ತಿಗೆ-ಬಾಡೂರು ಗ್ರಾಮಕಚೇರಿ ಬಳಿಯ ಮೈದಾನ, ಕುಂಬಳೆ- ಮೊಗ್ರಾಲ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನ, ಮಂಜೇಶ್ವರ- ಕುಂಜತ್ತೂರು ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಪೈವಳಿಕೆ-ಪೈವಳಿಕೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನ ಮಂಜೂರುಗೊಳಿಸಲಾಗಿದೆ.
ಕಾಸರಗೋಡು ಕ್ಷೇತ್ರದಲ್ಲಿ ಚೆರ್ಕಳ- ಚೆರ್ಕಳ ಸೆಂಟ್ರಲ್ ಶಾಲೆ ಮೈದಾನ, ಮೊಗ್ರಾಲ್ ಪುತ್ತೂರು-ಮೊಗ್ರಾಲ್ ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಮೈದಾನ, ಮಧೂರು- ಉಳಿಯತ್ತಡ್ಕ ಸಿರಿಬಾಗಿಲು ಶಾಲೆ ಮೈದಾನ, ಬದಿಯಡ್ಕ- ಬದಿಯಡ್ಕ ಗ್ರಾಮ ಪಂಚಾಯಿತಿ ಮೈದಾನ, ಕಾರಡ್ಕ- ಪೂವಡ್ಕ ಪಂಚಾಯತ್ ಕ್ರೀಡಾಂಗಣ, ಕುಂಬ್ಡಾಜೆ- ಮಾರ್ಪನಡ್ಕ ಮೈದಾನ, ಬೆಳ್ಳೂರು - ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನ, ಕಾಸರಗೋಡು ನಗರಸಭೆ- ತಾಳಿಪಡ್ಪು ಮೈದಾನ ನಿಗದಿಪಡಿಸಲಾಗಿದೆ.
ಉದುಮಾ ಕ್ಷೇತ್ರದಲ್ಲಿ ಚೆಮ್ನಾಡ್ - ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆ ಮೈದಾನ, ಉದುಮಾ - ಉದುಮಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನ, ಪಳ್ಳಿಕ್ಕರೆ - ಪಳ್ಳಿಕ್ಕರೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನ, ಕುತ್ತಿಕೋಲು-ಕುತ್ತಿಕೋಲು ಸರ್ಕಾರಿ ಪ್ರೌಢಶಾಲೆ ಮೈದಾನ, ಬೇಡಗಂ- ಕುಂಡಂಕುಳಿ ಸರ್ಕಾರಿ ಪ್ರೌಢಶಾಲೆ ಮೈದಾನ, ಪುಲ್ಲೂರು-ಪೆರಿಯ- ಪೆರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನ, ದೇಲಂಪಾಡಿ -ಅಡೂರು ಶಾಲೆ ಮೈದಾನ ನಿಗದಿಪಡಿಸಲಾಗಿದೆ.
ಕಾಞಂಗಾಡು ಕ್ಷೇತ್ರದಲ್ಲಿ ಬಳಾಲ್ ಸಂತ ಜೂಡ್ಸ್ ಹೈಯರ್ ಸೆಕೆಂಡರಿ ಶಾಲೆ ಮೈದಾನ, ಮಡಿಕೈ ಆಲಂಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನ, ಕಿನಾನೂರು-ಕರಿಂದಳಂನಲ್ಲಿ ಪರಪ್ಪ ಸರ್ಕಾರಿ ಹೈಯರ್ ಸೆಕೆಂಡರಿಶಾಲೆ ಮೈದಾನ, ಅಜಾನೂರು ಮಾವಂಗಾಲು ಮಿಲ್ಮಾ ಘಟಕ ಬಳಿಯ ಮೈದಾನ, ಪನತ್ತಡಿಯಲ್ಲಿ ಪಾಣತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನ, ಕಳ್ಳಾರ್ ಮಾಲಕ್ಕಲ್ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಮೈದಾನ, ಕೋಡೋಂ-ಬೇಳೂರಿನಲ್ಲಿ ಕಾಲಿಚ್ಚಾನಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನ, ಕಾಞಂಗಾಡ್ ನಗರಸಭೆಯಲ್ಲಿ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಪುರಭವನ ಬಳಿಯ ಮೈದಾನ ನಿಗದಿಪಡಿಸಲಾಗಿದೆ.
ತ್ರಿಕರಿಪುರ ಕ್ಷೇತ್ರದಲ್ಲಿ ವಲಿಯಪರಂಬದ ಪಡನ್ನ ಕಡಪ್ಪುರಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನ, ಪಿಲಿಕೋಡ್‍ನ ಕಾಲಿಕಡವು ಪಂಚಾಯಿತಿ ಮೈದಾನ, ತ್ರಿಕರಿಪುರ ರೈಲು ನಿಲ್ದಾಣ ಬಳಿಯ ಮೈದಾನ, ಕಯ್ಯೂರು ಚೀಮೇನಿಯ ಪಂಚಾಯಿತಿ ಮೈದಾನ, ಚೆರುವತ್ತೂರಿನ ಪಂಚಾಯಿತಿ ಮುಕ್ತ ಸಭಾಂಗಣ, ಪಡನ್ನದ ಉದಿನೂರು ಸೆಂಟ್ರಲ್ ಹಿರಿಯ ಪ್ರಾಥಮಿಕ ಶಾಲೆ ಮೈದಾನ, ವೆಸ್ಟ್ ಎಳೇರಿಯಲ್ಲಿ ಭೀಮನಡಿ ಪಂಚಾಯಿತಿ ಮೈದಾನ, ಈಸ್ಟ್ ಏಳೇರಿಯಲ್ಲಿ ಥೋಮಾಪುರಂ ಸಂತ ಥಾಮಸ್ ಪ್ರೌಢಶಾಲೆ ಮೈದಾನ, ನೀಲೇಶ್ವರ ನಗರಸಭೆಯಲ್ಲಿ ರಾಜಾಸ್ ಹೈಯರ್ ಸೆಕೆಂಡರಿ ಶಾಲೆ ಮೈದಾನ, ಚಿರಪ್ಪುರಂ ನಗರಸಭೆ ಕ್ರೀಡಾಂಗಣ ಮಂಜೂರುಗೊಳಿಸಲಾಗಿದೆ. ಚುನಾವಣೆ ಅಧಿಕಾರಿಗಳು ಅಭ್ಯರ್ಥಿಗಳು ಆಗ್ರಹಿಸುವ ಪ್ರಕಾರ ಮೈದಾನಗಳನ್ನು ಆದ್ಯತೆ ಕ್ರಮದಲ್ಲಿ ಮಂಜೂರು ಮಾಡಲಾಗುವುದು ಎಂದು ಚುನಾವಣಾ ಆಯೋಗ ಅಧಿಕಾರಿಗಳು ತಿಳಿಸಿದ್ದಾರೆ.



