ತಿರುವನಂತಪುರ: ಬೇರೆ ಯಾವುದೇ ವಿಷಯಗಳು ಇಲ್ಲದಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿಗೆ ಶಬರಿಮಲೆ ವಿಷಯಗಳನ್ನು ವಿನಾಃ ಕಾರಣ ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎ.ವಿಜಯರಾಘವನ್ ತಿಳಿಸಿದ್ದಾರೆ. ಜೊತೆಗೆ ಸಿಪಿಎಂಗೆ ಶಬರಿಮಲೆ ವಿಷಯದ ಬಗ್ಗೆ ಚರ್ಚಿಸಿ ಸಮರ್ಥಿಸಬೇಕಾಗಿಲ್ಲ ಎಂದೂ ಅವರು ಹೇಳಿರುವರು.
ಕಾಂಗ್ರೆಸ್ ಪತನವಾದರೆ ಬಿಜೆಪಿ ಬೆಳೆಯುತ್ತದೆ ಎಂಬುದು ವಿಚಿತ್ರವಾದ ವಾದ. ಬದಲಾವಣೆ ಕಾಂಗ್ರೆಸ್ ಕಾರ್ಯಕರ್ತರ ಆನುವಂಶಿಕ ಸ್ವಭಾವವಾಗಿದೆ. ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ರೋಡ್ ಶೋ ನಡೆಸಿದರೆ ಕೇರಳದಲ್ಲಿ ಯಾವುದೇ ಕ್ರಾಂತಿ ಉಂಟಾದ ಉದಾಹರಣೆ ಇಲ್ಲ ಎಂದು ವಿಜಯರಾಘವನ್ ಹೇಳಿದ್ದಾರೆ.


