ಮಂಜೇಶ್ವರ: ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಸಂಕಬೈಲು ಸತೀಶ ಅಡಪ್ಪ ಅವರನ್ನು ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಅವರು ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.
ಕಳೆದ 50 ವರುಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಇವರು ಯುವ ಕಾಂಗ್ರೆಸ್ ನ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಇವರ ಜೊತೆ ಉಪಾಧ್ಯಕ್ಷರಾಗಿದ್ದ ಬಾಲಕೃಷ್ಣ ಪೆರಿಯರವರು ಇದೀಗ ಉದುಮದಲ್ಲಿ ಯು.ಡಿ.ಎಫ್ ಸ್ಥನಾರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮಂಜೇಶ್ವರ ಮಂಡಲ ಕಾಂಗ್ರೆಸ್ ನಲ್ಲಿ 10 ವರುಷಗಳ ಕಾಲ ಅಧ್ಯಕ್ಷರಾಗಿಯೂ, ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ 10 ವರುಷಗಳ ಕಾಲ ದುಡಿದಿದ್ದರು. ಬಳಿಕ
ಕಳೆದ 10 ವರ್ಷಗಳಿಂದ ಯಾವುದೇ ಬದ್ದ ಕಾರ್ಯಚಟುವಟಿಕೆಗಳನ್ನ ಮಾಡದೆ ಕೇವಲ ಸ್ವಾಭಿಮಾನದಿಂದ ಕಾರ್ಯಕರ್ತರಂತೆ ದುಡಿಯುತ್ತಿದ್ದರು. ಇದೀಗ ಮತ್ತೆ ಇವರಿಗೆ ಮಿಂಜ ಮಂಡಲ ಅಧ್ಯಕ್ಷ ಸ್ಥಾನ ದೊರಕುವ ಮೂಲಕ ಪಕ್ಷದ ಕಾರ್ಯಚಟುವಟಿಕೆ ಕೈಗೊಳ್ಳಲು ಹೊಸ ಹುಮ್ಮಸ್ಸು ನೀಡಿದೆ.





