ಕಾಸರಗೋಡು: ಕಡುಬೇಗೆಯ ಬೇಸಿಗೆಯಲ್ಲಿ ಬಾಯಾರಿ ನೀರಿಗಾಗಿ ಪಕ್ಷಿಗಳು ಮತ್ತು ಪ್ರಾಣಿಗಳು ಮನುಷ್ಯರಂತೆ ದಿಕ್ಕಿಡುತ್ತಿವೆ. ಆದರೆ ಅವುಗಳಿಗೆ ನೀರನ್ನು ಸಿದ್ಧಪಡಿಸುವುದು ಮನುಷ್ಯರ ಕರ್ತವ್ಯ ಎಂದು ಲಯನ್ಸ್ ಗವರ್ನರ್ ಡಾ.ಒ.ವಿ.ಸನಲ್ ಪಂಜು ಹೇಳಿದರು.
ಅವರು ಬೇಕಲ್ ಫೆÇೀರ್ಟ್ ಲಯನ್ಸ್ ಕ್ಲಬ್ ಪಕ್ಷಿಗಳಿಗಾಗಿ ಸಿದ್ದಪಡಿಸಿದ ಹಕ್ಕಿಗಳ ಕುಡಿನೀರು ಯೋಜನೆ ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೇಕಲ್ ಫೆÇೀರ್ಟ್ ಲಯನ್ಸ್ ಕ್ಲಬ್ ಅಧ್ಯಕ್ಷ ಅಬ್ದುಲ್ ನಾಸರ್ ಅಧ್ಯಕ್ಷತೆ ವಹಿಸಿದ್ದರು. ಶಾಜಿ ಜೋಸೆಫ್, ರಾಮಚಂದ್ರನ್, ಸಲಾಮ್ ಕೇರಳ, ಅನ್ವರ್ ಹಸನ್, ಎಂ.ಬಿ. ಹನೀಫ್, ಶೌಕತಲಿ, ನೌಶಾದ್ ಸಿ.ಎಂ., ಗೋವಿಂದನ್ ನಂಬೂದಿರಿ, ಹರೂನ್ ಚಿತ್ತಾರಿ, ಶ್ರೀಕುಮಾರ್ ಪಲ್ಲಂಚಿ, ಬಶೀರ್ ಕುಶಾಲ್ ಮೊದಲಾದವರು ಉಪಸ್ಥಿತರಿದ್ದರು.


