ಮಂಜೇಶ್ವರ: ಪೈವಳಿಕೆ ಮಂಡಲ ಕಾಂಗ್ರೆಸ್ಸ್ ನೇತಾರ ಮಂಜುನಾಥ ಶೆಟ್ಟಿ ಅವರ ಮೇಲೆ ಮುಸ್ಲಿಂಲೀಗ್ ಕಾರ್ಯಕರ್ತರು ಆಕ್ರಮಣ ನಡೆಸಿದ ಘಟನೆ ನಿನ್ನೆ ನಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್.ಡಿ.ಎಫ್ ಅಭ್ಯರ್ಥಿ ವಿ.ವಿ.ರಮೇಶನ್ ಅವರು ಮಂಜುನಾಥ ಶೆಟ್ಟಿ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.


