ಕುಂಬಳೆ: ಶಿರಿಯಾ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ ಇಬ್ಬರು ಯುವಕರು ಮುಳುಗಿ ಮೃತಪಟ್ಟಿದ್ದು, ಒಬ್ಬ ನಾಪತ್ತೆಯಾಗಿದ್ದಾನೆ.
ಕುಂಬಳೆಯ ಮನೆಯೊಂದರಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕರ್ನಾಟಕದ ಪುತ್ತೂರಿನ ಕಾರ್ತಿಕ್ (18) ಮತ್ತು ಕೀರ್ತನ್ (19) ಮೃತಪಟ್ಟಿದ್ದಾರೆ. ಕಾಣೆಯಾದ ವ್ಯಕ್ತಿಯ ಹುಡುಕಾಟ ಮುಂದುವರಿದಿದೆ.
ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ಮೂವರು ಕರ್ನಾಟಕ ಪುತ್ತೂರು ನಿವಾಸಿಗಳಾಗಿದ್ದು ಸೋಮವಾರ ಸಂಜೆ 4 ಗಂಟೆಗೆ ನದಿಯಲ್ಲಿ ಈಜಲು ತೆರಳಿದ್ದರು. ಒಬ್ಬ ನೀರಲ್ಲಿ ಮುಳುಗುತ್ತಿರುವುದನ್ನು ಗಮನಿಸಿ ರಕ್ಷಿಸಲು ಧುಮುಕಿದ ಮತ್ತಿಬ್ಬರು ಮುಳುಗಿ ದುರ್ಘಟನೆ ಸಂಭವಿಸಿದೆ. ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿತು.
ಅವರೊಂದಿಗೆ ಇದ್ದ ಇತರರು, ಸ್ಥಳೀಯರು ಮತ್ತು ಮೀನುಗಾರರು ಮಾಹಿತಿ ನೀಡಿದ ಬಳಿಕ ನಡೆಸಿದ ಶೋಧದ ವೇಳೆ ಇಬ್ಬರ ಶವಗಳು ಪತ್ತೆಯಾಗಿವೆ. ನಾಪತ್ತೆಯಾದ ವ್ಯಕ್ತಿಯನ್ನು ಸ್ಥಳೀಯರು, ಮೀನುಗಾರರು, ಅಗ್ನಿಶಾಮಕ ದಳ ಮತ್ತು ಪೋಲೀಸರಿಂದ ಹುಡುಕುವ ಕಾರ್ಯಾಚರಣೆ ಮುಂದುವರಿದಿದೆ.






