ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಕಾಂಗ್ರೆಸ್ಸ್ ಗೆ ಮತ ಚಲಾಯಿಸುವಂತೆ ಸಿಪಿಎಂ ಗೆ ಆಹ್ವಾನ ನೀಡಿದ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರನ್ನು ಹುತಾತ್ಮರಾದ ಕೃಪೇಶ್ ಮತ್ತು ಶರತ್ ಲಾಲ್ ಅವರ ಆತ್ಮಗಳು ಕ್ಷಮಿಸಲಾರವು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.
ಮುಲ್ಲಪ್ಪಳ್ಳಿ ಅವರು ಹುತಾತ್ಮರ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ ಮತ್ತು ಅವರು ನಾಚಿಕೆಗೇಡಿನ ಮನವಿ ಮಾಡಿದ್ದಾರೆ ಎಂದು ಸುರೇಂದ್ರನ್ ಮಾಧ್ಯಮಗಳಿಗೆ ತಿಳಿಸಿದರು.
ಇದು ಕಾಂಗ್ರೆಸ್ಸಿನ ರಾಜಕೀಯ ಅಸ್ಥಿರತೆಯನ್ನು ತೋರಿಸುತ್ತದೆ ಎಂದು ಸುರೇಂದ್ರನ್ ಹೇಳಿದ್ದಾರೆ. ಕಾಂಗ್ರೆಸ್ ದಿವಾಳಿಯಾಗಿದೆ ಮತ್ತು ಎನ್‍ಡಿಎ ಪ್ರಗತಿ ಸಾಧಿಸುತ್ತದೆ ಎಂಬುದನ್ನು ಮನಗಂಡ ಮುಲ್ಲಪ್ಪಳ್ಳಿ ಅವರು ಸಾರ್ವಜನಿಕವಾಗಿ ಮತಗಳನ್ನು ಯಾಚಿಸುತ್ತಿರುವುದು ಹೇಯಕರವಾಗಿದೆ. ಮಂಜೇಶ್ವರ ಅಲ್ಲದೆ ಯುಡಿಎಫ್ ಮತ್ತು ಸಿಪಿಎಂ ನೇಮಂ ಮತ್ತು ಕಳಿಕೂಟ್ಟಂನಲ್ಲಿ ಒಂದಾಗುತ್ತಿವೆ. ತಲಶೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಆತ್ಮಸಾಕ್ಷಿಯ ಅನುಸಾರ ಮತ ಚಲಾಯಿಸಬಹುದು ಎಂದು ಕೆ ಸುರೇಂದ್ರನ್ ಹೇಳಿದರು.
ಬಿಜೆಪಿಯನ್ನು ಸೋಲಿಸಲು ಎಲ್‍ಡಿಎಫ್ ನೊಂದಿಗೆ ತೆರೆಮರೆಯಲ್ಲಿ ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಭಾನುವಾರ ಹೇಳಿದ್ದರು. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಸಜ್ಜಾಗಿದೆ. ಸಿಪಿಎಂ ಮಂಜೇಶ್ವರದಲ್ಲಿ ಎಸ್.ಡಿ.ಪಿ.ಐ ಯಂತಹ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಮುಲ್ಲಪ್ಪಳ್ಳಿ ಹೇಳಿದ್ದರು.
ಆದರೆ ಉಮ್ಮನ್ ಚಾಂಡಿ ಮುಲ್ಲಪ್ಪಳ್ಳಿಯ ಹೇಳಿಕೆಯನ್ನು ತಿರಸ್ಕರಿಸಿದ್ದು, ಮಂಜೇಶ್ವರದಲ್ಲಿ ಯುಡಿಎಫ್ ತನ್ನದೇ ಮತಗಳಿಂದ ಗೆಲ್ಲಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯುಡಿಎಫ್ ಕಳೆದ ಚುನಾವಣೆಯಲ್ಲಿ ಸಾಬೀತುಪಡಿಸಿದೆ ಎಂದು ಅವರು ಹೇಳಿದರು.
ಎನ್‍ಡಿಎ ಅಭ್ಯರ್ಥಿಯಾಗಿ ಬಿಜೆಪಿ ಅಧ್ಯಕ್ಷ ಸುರೇಂದ್ರನ್, ಯುಡಿಎಫ್ ಅಭ್ಯರ್ಥಿಯಾಗಿ ಎಕೆಎಂ ಅಶ್ರಫ್ ಮತ್ತು ಎಲ್‍ಡಿಎಫ್ ಅಭ್ಯರ್ಥಿಯಾಗಿ ವಿ.ವಿ.ರಮೇಶ್ ಸ್ಪರ್ಧಿಸುತ್ತಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಜಯಗಳಿಸಿದ ಯುಡಿಎಫ್ ನ ಎಂ.ಸಿ.ಕಮರುದ್ದೀನ್, ಅವರ ಮೇಲಿರುವ ಜುವೆಲ್ಲರಿ ವಂಚನೆ ಹಗರಣದ ಜೈಲು ಶಿಕ್ಷೆ ಮತ್ತು ಆರೋಪಗಳು ಯುಡಿಎಫ್ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಫಲಿತಾಂಶಗಳು ಪ್ರಕಟವಾಗುವವರೆಗೆ ಕಾಯಬೇಕಾಗುತ್ತದೆ.



