HEALTH TIPS

ನಾಳೆ ವಿಧಾನಸಭೆ ಚುನಾವಣೆ: ಸಿದ್ದತೆಗಳು ಪೂರ್ಣ

         

           ಕಾಸರಗೋಡು: ವಿಧಾನಸಭೆ ಕ್ಷೇತ್ರಗಳ ಚುನಾವಣೆ ಮಂಗಳವಾರ ನಡೆಯಲಿದೆ. 

                    ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಮತಚಲಾವಣೆ ನಡೆಯಲಿದೆ. ಈ ಬಾರಿ ಒಂದು ತಾಸು ಹೆಚ್ಚುವರಿ ಒದಗಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲೂ ಕೊನೆಯ ಒಂದು ತಾಸು ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸದೇ ಇರುವ ಕೋವಿಡ್ ರೋಗಿಗಳಿಗೆ, ಪ್ರಾಥಮಿಕ ಸಂಪರ್ಕ ಹೊಂದಿರುವವರು ಮತದಾನ ನಡೆಸುವವರಿಗೆ ಇದೆ. ಇದಕ್ಕಾಗಿ ಪೆÇೀಲಿಂಗ್ ಸಿಬ್ಬಂದಿಗೆ ಪಿ.ಪಿ.ಇ. ಕಿಟ್ ವಿತರಿಸಲಾಗುವುದು. 


               ಮಂಜೇಶ್ವರ, ಕಾಸರಗೋಡು, ಉದುಮಾ, ಕಾಞಂಗಾಡು, ತ್ರಿಕರಿಪುರ ಎಂಬ 5 ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ಜರುಗುವುದು.   

         ಮಂಜೇಶ್ವರ, ಕಾಸರಗೋಡು, ಉದುಮಾ, ಕಾಞಂಗಾಡ್, ತ್ರಿಕರಿಪುರ ವಿಧಾನಸಭೆ ಕ್ಷೇತ್ರಗಳ 1591 ಮತಗಟ್ಟೆಗಳಲ್ಲಿ ಮತದಾನಕ್ಕೆ ಸಜ್ಜೀಕರಣ ನಡೆದಿದೆ. ಇವುಗಳಲ್ಲಿ 983 ಪ್ರಧಾನ ಮತಗಟ್ಟೆಗಳು, 608 ತಾತ್ಕಾಲಿಕ ಮತಗಟ್ಟೆಗಳು ಇವೆ. 

             ವಿಧಾನಸಭೆ ಚುನಾವಣೆ ಅಂಗವಾಗಿ ಮತದಾತರ ಪಟ್ಟಿಯಲ್ಲಿ 2021 ಜ.20ರ ನಂತರ ನೂತನವಾಗಿ ಸೇರ್ಪಡೆಗೊಂಡಿರುವವರೂ ಸೇರಿ ಜಿಲ್ಲೆಯಲ್ಲಿ ಒಟ್ಟು 10,59,967 ಮಂದಿ ಮತದಾತರಿದ್ದಾರೆ. ಇವರಲ್ಲಿ ಆನಿವಾಸಿ ಮತದಾತರೂ ಸೇರಿ ಒಟ್ಟು 1058337 ಮಂದಿ ಸಾಮಾನ್ಯ ಮತದಾತರು, 1630 ಸೇವಾ ಮತದಾತರು ಇದ್ದಾರೆ. ಒಟ್ಟು ಮತದಾತರಲ್ಲಿ 518501 ಮಂದಿ ಪುರುಷರು, 541460 ಮಂದಿ ಮಹಿಳೆಯರು, 6 ಮಂದಿ ತೃತೀಯ ಲಿಂಗಿಗಳು ಇದ್ದಾರೆ. 

                                153 ಮಂದಿ ಮೈಕ್ರೋ ಒಬ್ಸರ್ ವರ್ ಗಳು, ತಲಾ 1989 ಮಂದಿ ಪ್ರಿಸೈಡಿಂಗ್ ಅಧಿಕಾರಿಗಳು,  ಫಸ್ಟ್ ಪೆÇೀಲಿಂಗ್ ಅಧಿಕಾರಿಗಳು, ದ್ವಿತೀಯ ಪೆÇೀಲಿಂಗ್ ಅಧಿಕಾರಿಗಳು,  ತೃತೀಯ ಪೆÇೀಲಿಂಗ್ ಅಧಿಕಾರಿಗಳು ಸಹಿತ 9700 ಮಂದಿ ಸಿಬ್ಬಂದಿ ಕಾಸರಗೋಡು ಜಿಲ್ಲೆಯಲ್ಲಿ ಇ- ಪೆÇೀಸ್ಟಿಂಗ್ ಮೂಲಕ ಚುನಾವಣೆ ಕರ್ತವ್ಯದಲ್ಲಿದ್ದಾರೆ. ಶೇ 40 ರಿಸರ್ವ್ ಸಿಬ್ಬಂದಿಯೂ ಇದ್ದಾರೆ. ಇದಲ್ಲದೆ ಕೋವಿಡ್ 19 ಸಂಹಿತೆ ಖಚಿತಪಡಿಸುವ ನಿಟ್ಟಿನಲ್ಲಿ ಎಲ್ಲ ಮತಗಟ್ಟೆಗಳಲ್ಲೂ ತಲಾ ಒಬ್ಬರು ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ನೇಮಕಗೊಂಡಿದ್ದಾರೆ. 


                           ಪೋಲಿಂಗ್ ಸಾಮಾಗ್ರಿಗಳ ವಿತರಣೆ 

        ಮಂಗಳವಾರ ನಡೆಯುವ ವಿಧಾನಸಭೆ ಕ್ಷೇತ್ರಗಳ ಚುನಾವಣೆ ಗಾಗಿ ಪೆÇೀಲಿಂಗ್ ಸಾಮಾಗ್ರಿಗಳ ವಿತರಣೆ ಸೋಮವಾರ ಜರುಗಿತು. ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳ ವಿವಿಧ ಮತಗಟ್ಟೆಗಳಿಗೆ ಈ ಸಾಮಾಗ್ರಿಗಳನ್ನು ಪಡೆದು ಸಿಬ್ಬಂದಿ ತೆರಳಿದರು. 


                  ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಮತಗಟ್ಟೆಗಳಿಗೆ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಿಂದ, ಕಾಸರಗೋಡು ವಿದಾನಸಭೆ ಕ್ಷೇತ್ರದ ವಿಧಾನಸಭೆ ಕ್ಷೇತ್ರದ ಮತಗಟ್ಟೆಗಳಿಗೆ ಕಾಸರಗೋಡು ಸರಕಾರಿ ಕಾಲೇಜಿನಿಂದ, ಉದುಮಾ ವಿಧಾನಸಭೆ ಕ್ಷೇತ್ರದ ಮತಗಟ್ಟೆಗಳಿಗೆ ಪೆರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ, ಕಾಞಂಗಾಡು ವಿದಾನಸಭೆ ಕ್ಷೇತ್ರದ ಮತಗಟ್ಟೆಗಳಿಗೆ ನೆಹರೂ ಕಲಾ ವಿಜ್ಞಾನ ಕಾಲೇಜಿನಿಂದ, ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ಮತಗಟ್ಟೆಗಳಿಗೆ ಇ.ಕೆ.ಎನ್.ಎಂ.ಪಾಲಿಟೆಕ್ನಿಕ್ ಕಾಲೇಜಿನಿಂದ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries