ಕಾಸರಗೋಡು : ಕಾಸರಗೋಡು ಜಿಲ್ಲಾ ಪಂಚಾಯತ್ ನ 50 ಲಕ್ಷ ರೂ., ಸದಸ್ಯರ ಒಂದು ತಿಂಗಳ ಗೌರವಧನವನ್ನು ಮುಖ್ಯಮಂತ್ರಿ ವಾಕ್ಸಿನೇಷನ್ ಚಾಲೆಂಜ್ ಗೆ ಹಸ್ತಾಂತರ ಮಾಡಲಾಗಿದೆ.
ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಜಿಲ್ಲಾ ಪಂಚಾಯತ್ ಮತ್ತು ಸದಸ್ಯರ ವತಿಯಿಂದ ಈ ರೀತಿಯ ದೇಣಿಗೆ ಸಂದಿದೆ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು ಅವರು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಮೊಬಲಗು ಹಸ್ತಾಂತರಿಸಿದರು. ಸ್ಥಾಯೀ ಸಮಿತಿ ಸದಸ್ಯರಾದ ಕೆ.ಶಕುಂತಲಾ, ಗೀತಾ ಕೃಷ್ಣನ್, ಸರಿತಾ ಎಸ್.ಎನ್., ಷಿನೋಜ್ ಚಾಕೋ ಮೊದಲಾದವರು ಜತೆಗಿದ್ದರು.
ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ 50 ಲಕ್ಷ ರೂ.ನ ಆಕ್ಸಿಜನ್ ಪ್ಲಾಂಟ್ ಸಜ್ಜುಗೊಳ್ಳುತ್ತಿದೆ. ಜಿಲ್ಲಾ ಪಂಚಾಯತ್ ನ ಮಾದರಿ ಕ್ರಮದಿಂದ ಪ್ರಭಾವಿತರಾಗಿ ಇತರ ಸ್ಥಳೀಯಾಡಳಿತ ಸಂಸ್ಥೆಗಳೂ ವಾಕ್ಸಿನೇಷನ್ ಚಾಲೆಂಜ್ ಗೆ ದೇಣಿಗೆ ನೀಡುವ ಸಿದ್ಧತೆಯಲ್ಲಿವೆ.



