ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ನ ನೇತೃತ್ವದಲ್ಲಿ ಚಟ್ಟಂಚಾಲ್ ಉದ್ದಿಮೆ ಉದ್ಯಾನದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ನಿರ್ಮಿಸಲಾಗುವ ಆಕ್ಸಿಜನ್ ಪ್ಲಾಂಟ್ ನ ಕ್ರಮಗಳನ್ನು ತ್ವರಿತಗೊಳಿಸಲು ನಿರ್ಧರಿಸಲಾಗಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೋವಿಡ್ ಪ್ರತಿರೋಧ ನಿಟ್ಟಿನಲ್ಲಿ 2 ಸಾವಿರ ಆಕ್ಸಿಮೀಟರ್ ಖರೀದಿಸಲು ನಿರ್ಧರಿಸಲಾಗಿದೆ. ಟೆಲಿ ಮೆಡಿಸಿನ್ ಸೌಲಭ್ಯ ಏರ್ಪಡಿಸಲೂ ತೀರ್ಮಾನಿಸಲಾಗಿದೆ. ಆದ್ರರ್ಂ ಯೋಜನೆಯ ಕಟ್ಟಡವನ್ನು ಕೋವಿಡ್ ವಾರ್ಡಾಗಿ ಪರಿವರ್ತಿಸುವ ನಿಟ್ಟಿನಲ್ಲಿ 8.5 ಲಕ್ಷ ರೂ. ನ ಆಕ್ಸಿಜನ್ ಸೆಕ್ಷನ್ ಲೈನ್ ಸ್ಥಾಪಿಸಲಾಗುವುದು. 7.5 ಲಕ್ಷ ರೂ.ನ ವಾಟರ್ ಕನೆಕ್ಷನ್ ಎಸ್ಟಿಮೇಟ್ ಗೆ ಅಂಗೀಕಾರ ನೀಡಲಾಗಿದೆ. ಸ್ಪಿನ್ ಓವರ್ ಯೋಜನೆಗಳಿಗೆ ಅಂಗೀಕಾರ ನಿಡಿಕೆ, ಯೋಜನೆಯಲ್ಲಿ ಬದಲಾವಣೆ ನಡೆಸಿ ಜಿಲ್ಲಾ ಯೋಜನೆ ಸಮಿತಿಯ ಅಂಗೀಕಾರ ಪಡೆಯುವಿಕೆ ಸಂಬಂಧ ತೀರ್ಮಾನ 15ರಂದು ಕೈಗೊಳ್ಳಲಾಗುವುದು ಎಂದು ಸಬೆ ತಿಳಿಸಿದೆ.
ಜಿಲ್ಲೆಯ ಡಯಾಲಿಸಿಸ್ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೌಲಭ್ಯಕ್ಕಾಗಿ ಡಿ.ಸಿ.ಪಿ. ಸಿದ್ಧಗೊಳಿಸಿರುವ ಯೋಜನೆ ಸಂಬಂಧ ಮಾತುಕತೆ ನಡೆಸಿ ಜಿಲ್ಲಾ ಪಂಚಾಯತ್ ನ ಪಾಲು ಮಂಜೂರು ಮಾಡಲಾಗುವುದು ಎಂದು ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಕೆ.ಶಕುಂತಲಾ, ಗೀತಾ ಕೃಷ್ಣನ್, ಸರಿತಾ ಎಸ್.ಎಲ್., ಷನೋಜ್ ಚಾಕೋ, ಜಿಲ್ಲಾ ಪಂಚಾಯತ್ ಸದಸ್ಯರು, ಕಾರ್ಯದರ್ಶಿ ಪಿ.ನಂದಕುಮಾರ್, ನಿರ್ವಹಣೆ ಸಿಬ್ಬಂದಿ ಉಪಸ್ಥಿತರಿದ್ದರು.



