ತಿರುವನಂತಪುರ: ಆರರಿಂದ ಒಂಬತ್ತು ರೈಲುಗಳು ಈ ತಿಂಗಳಲ್ಲಿ ಕೇರಳದಲ್ಲಿ ಪುನರಾರಂಭಗೊಳ್ಳಲಿವೆ. ರೈಲುಗಳು ಜೂನ್ 16 ಮತ್ತು 17 ರಂದು ಸೇವೆ ಪ್ರಾರಂಭಿಸಲಿವೆ ಎಂದು ರೈಲ್ವೆ ತಿಳಿಸಿದೆ.
ಮೈಸೂರು ಕೊಚುವೇಲಿ ಮೈಸೂರು ಎಕ್ಸ್‍ಪ್ರೆಸ್, ಬೆಂಗಳೂರು ಎರ್ನಾಕುಳಂ ಬೆಂಗಳೂರು ಸೂಪರ್ ಫಾಸ್ಟ್, ಎರ್ನಾಕುಳಂ ಕಾರೈಕಲ್ ಎರ್ನಾಕುಳಂ ಎಕ್ಸ್‍ಪ್ರೆಸ್, ಮಂಗಳೂರು ಕೊಯಮತ್ತೂರು ಮಂಗಳೂರು,ಮಂಗಳೂರು ಚೆನ್ನೈ ಮಂಗಳೂರು ಸೂಪರ್‍ಫಾಸ್ಟ್ , ಚೆನ್ನೈ ತಿರುವನಂತಪುರ ಚೆನ್ನೈ ಸೂಪರ್‍ಫಾಸ್ಟ್, ಮಂಗಳೂರು ಚೆನ್ನೈ ಮಂಗಳೂರು ಸೂಪರ್‍ಫಾಸ್ಟ್, ಚೆನ್ನೈ ತಿರುವನಂತಪುರ ಚೆನ್ನೈ ಸೂಪರ್‍ಫಾಸ್ಟ್, ಚೆನ್ನೈ ತಿರುವನಂತಪುರ ಚೆನ್ನೈ ವೀಕ್ಲಿ ಸೂಪರ್‍ಫಾಸ್ಟ್, ಚೆನ್ನೈ ಆಲಪ್ಪುಳ ಚೆನ್ನೈ ಸೂಪರ್‍ಫಾಸ್ಟ್ ಸಂಚಾರ ಆರಂಭಿಸಲಿವೆ.
ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ರೈಲ್ವೆ ರಾಜ್ಯದಲ್ಲಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಲಾಕ್ಡೌನ್ ನಿರ್ಬಂಧಗಳನ್ನು ಕಡಿತಗೊಳಿಸಿರುವ ಮಧ್ಯೆ ರೈಲು ಸೇವೆಗಳನ್ನು ಪುನರಾರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ.


