ಕೊಚ್ಚಿ: ಕೊಚ್ಚಿಯಲ್ಲಿರುವ ದಕ್ಷಿಣ ನೌಕಾ ಕೇಂದ್ರ ಕಚೇರಿಗೆ ಭೇಟಿ ನೀಡಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೊಚ್ಚಿಗೆ ಗುರುವಾರ ಆಗಮಿಸಿದರು. ಅವರು ಗುರುವಾರ ಸಂಜೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರೊಂದಿಗೆ ನೌಕಾ ವಾಯು ನಿಲ್ದಾಣಕ್ಕೆ ಆಗಮಿಸಿದರು. ದಕ್ಷಿಣ ನೌಕಾಪಡೆಯ ಮುಖ್ಯಸ್ಥ ವೈಸ್ ಅಡ್ಮಿರಲ್ ಎ.ಕೆ.ಚಾವ್ಲಾ ಅವರು ಸ್ವಾಗತಿಸಿದರು.
ರಾಜನಾಥ ಸಿಂಗ್ ಅವರು ಒಂದು ದಿನದ ಭೇಟಿಗಾಗಿ ಸದರ್ನ್ ನೇವಲ್ ಕಮಾಂಡ್‍ಗೆ ಆಗಮಿಸಿದರು. ನೌಕಾನೆಲೆಗೆ ಭೇಟಿ ನೀಡಿ ವಿಮಾನವಾಹಕ ನೌಕೆ ಐ.ಎನ್.ಎಸ್ ವಿಕ್ರಾಂತ್ ನ ನಿರ್ಮಾಣ ಕಾರ್ಯಗಳನ್ನು ಅವಲೋಕನ ನಡೆಸಿದರು. ಸಚಿವರ ನೇತೃತ್ವದಲ್ಲಿ ತಂಡ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿತು. ರಾಜನಾಥ್ ಸಿಂಗ್ ಅವರು ಕಮಾಂಡ್ ನೇತೃತ್ವದಲ್ಲಿ ಆಗುತ್ತಿರುವ ಪ್ರಗತಿಯನ್ನು ಪರಿಶೀಲಿಸಿದರು. ಮತ್ತು ಕೊರೋನಾ ರಕ್ಷಣಾ ಕಾರ್ಯಾಚರಣೆಗೆ ಕೈಗೊಂಡ ಕ್ರಮಗಳನ್ನು ವೀಕ್ಷಿಸಿದರು.
ಕೊರೋನಾ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳೀಯಾಡಳಿತಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಹಿರಿಯ ಸೈನಿಕರು ರಾಜನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಿದರು. ಅವರು ಇಂದು ದೆಹಲಿಗೆ ಮರಳಲಿದ್ದಾರೆ.


