ಕೊಚ್ಚಿ: ಈ ವರ್ಷದ ಡಿಸೆಂಬರ್ ವೇಳೆಗೆ ಕೊಚ್ಚಿ-ಬೆಂಗಳೂರು ಕೈಗಾರಿಕಾ ಕಾರಿಡಾರ್‍ಗೆ ಭೂಸ್ವಾಧೀನವನ್ನು ಪೂರ್ಣಗೊಳಿಸಲು ಕೈಗಾರಿಕಾ ಸಚಿವ ಪಿ.ರಾಜೀವ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಾಲಕ್ಕಾಡ್ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಯೋಜನೆಗಾಗಿ ಗುರುತಿಸಲಾದ 2220 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೇರಳ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಲಾಗುವುದು.
ಪಾಲಕ್ಕಾಡ್ ಕಣ್ಣಂಪ್ರದಲ್ಲಿ 312 ಎಕರೆ, ಪುತ್ತುಸ್ಸೆರಿ ಸೆಂಟ್ರಲ್‍ನಲ್ಲಿ 600, ಪುತ್ತುಸ್ಸೆರಿ ಪೂರ್ವದಲ್ಲಿ 558 ಮತ್ತು ಒಳಲಪ್ಪತಿಯಲ್ಲಿ 250 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಕ್ರಮಗಳು ವೇಗವಾಗಿ ಸಾಗುತ್ತಿವೆ ಎಂದು ಪಾಲಕ್ಕಾಡ್ ಜಿಲ್ಲಾಧಿಕಾರಿ ಮೃಣ್ಮಯಿ ಜೋಶಿ ಮಾಹಿತಿ ನೀಡಿರುವರು. ಬೇರೆಡೆ, ಭೂಸ್ವಾಧೀನ ಕಾಯ್ದೆಯಡಿ ನೋಟಿಸ್ ನೀಡಲಾಗಿದ್ದು, ಸಾರ್ವಜನಿಕ ವಿಚಾರಣೆ ನಡೆಸಲಾಯಿತು. ಈ ಹಿಂದೆ ಪಾಲಕ್ಕಾಡ್‍ನಲ್ಲಿ ಭೂಸ್ವಾಧೀನಕ್ಕಾಗಿ ಕಿನ್‍ಫ್ರಾ ಗೆ 346 ಕೋಟಿ ರೂ. ಹಸ್ತಾಂತರಿಸಲಾಗಿತ್ತು.
ಎರ್ನಾಕುಳಂ ಜಿಲ್ಲೆಯ ಅಯ್ಯಂಪುಳದಲ್ಲಿರುವ ಕಾರಿಡಾರ್‍ನ ಭಾಗವಾಗಿ ಗಿಫ್ಟ್ ಸಿಟಿ ಯೋಜನೆಗಾಗಿ 500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು. ಇದಕ್ಕಾಗಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಿನ್‍ಫ್ರಾ 50 ಲಕ್ಷ ರೂ.ವನ್ನು ಈಗಾಗಲೇ ಅನುಮತಿಸಿದೆ. ಭೂಸ್ವಾಧೀನದ ಭಾಗವಾಗಿ ಸಾಮಾಜಿಕ ಪ್ರಭಾವದ ಮೌಲ್ಯಮಾಪನವೂ ಪೂರ್ಣಗೊಂಡಿದೆ. ಜುಲೈ 8, 9 ಮತ್ತು 10 ರಂದು ಸಾರ್ವಜನಿಕರಿಂದ ಸಾಕ್ಷ್ಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಸುಹಾಸ್ ಮಾಹಿತಿ ನೀಡಿರುವರು.
ಉದ್ಯಮ ಕಾರಿಡಾರ್‍ನ ದಿನನಿತ್ಯದ ವಿವರಗಳು ಮತ್ತು ಅನುಸರಣೆಗೆ ಅನುಕೂಲವಾಗುವಂತೆ ಕಿನ್‍ಫ್ರಾ ಮೀಸಲಾದ ವೆಬ್ ಪೆÇೀರ್ಟಲ್ ಅನ್ನು ರಚಿಸುತ್ತದೆ. ಕಾರಿಡಾರ್‍ನ ಭಾಗವಾಗಿರುವ ಪಾಲಕ್ಕಾಡ್ ಕೇಂದ್ರದಲ್ಲಿ ಆಹಾರ ಉದ್ಯಮ, ಔಷಧೀಯ ವಸ್ತುಗಳು, ಲಘು ಎಂಜಿನಿಯರಿಂಗ್ ಉದ್ಯಮ, ಸಸ್ಯಶಾಸ್ತ್ರೀಯ ಉತ್ಪನ್ನಗಳು, ಜವಳಿ, ಘನತ್ಯಾಜ್ಯ ಮರುಬಳಕೆ, ಎಲೆಕ್ಟ್ರಾನಿಕ್ಸ್, ಐಟಿ ಲಾಜಿಸ್ಟಿಕ್ಸ್ ಮತ್ತು ಆಟೋಮೋಟಿವ್ ಗುಂಪುಗಳಿವೆ.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಕೆ. ಎಲಂಗೋವನ್, ಕಿನ್ಫ್ರಾ ಎಂಡಿ. ಸಂತೋಷ್ ಕೋಶಿ ಥಾಮಸ್ ಮತ್ತು ಇತರರು ಸಭೆಯಲ್ಲಿ ಭಾಗವಹಿಸಿದ್ದರು.


