ತಿರುವನಂತಪುರ: ರಾಜ್ಯ ಪೋಲೀಸ್ ಮುಖ್ಯಸ್ಥರ ಅಂತಿಮ ಪಟ್ಟಿ ಸಿದ್ದಪಡಿಸಲಾಗಿದೆ. ಅಂತಿಮ ಪಟ್ಟಿಯಲ್ಲಿ ಬಿ ಸಂಧ್ಯಾ, ಸುದೇಶ್ ಕುಮಾರ್ ಮತ್ತು ಅನಿಲ್ ಕಾಂತ್ ಇದ್ದಾರೆ. ಟೋಮಿನ್ ತಚ್ಚಂಗೇರಿಯ ಹೆಸರನ್ನು ಕೈಬಿಡಲಾಗಿದೆ. ದೆಹಲಿಯಲ್ಲಿ ನಡೆದ ಯುಪಿಎಸ್ಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಜ್ಯ ಪೋಲೀಸ್ ಮುಖ್ಯಸ್ಥ ಹುದ್ದೆಗೆ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರ ನೀಡಿತ್ತು. ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೋಲೀಸ್ ಮುಖ್ಯಸ್ಥರು ಭಾಗವಹಿಸಿದ್ದ ಸಭೆಯಲ್ಲಿ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಈಗ ಸರ್ಕಾರ ಮೂವರಲ್ಲಿ ಒಬ್ಬರನ್ನು ರಾಜ್ಯ ಪೋಲೀಸ್ ಮುಖ್ಯಸ್ಥರನ್ನಾಗಿ ನೇಮಿಸಬಹುದು.
ರಾಜ್ಯವು ಆರಂಭದಲ್ಲಿ 12 ಅಭ್ಯರ್ಥಿಗಳ ಪಟ್ಟಿಯನ್ನು ಯುಪಿಎಸ್‍ಸಿಗೆ ಸಲ್ಲಿಸಿತ್ತು. ಆದರೆ, ಅಪೂರ್ಣ ಸೇವೆಯನ್ನು ಉಲ್ಲೇಖಿಸಿ ಮೂರು ಜನರನ್ನು 30 ವರ್ಷಗಳ ಸೇವೆಯಿಂದ ವಿನಾಯಿತಿ ನೀಡಲಾಗಿದೆ. ಇದನ್ನು ಅನುಸರಿಸಿ ರಾಜ್ಯವು ಮತ್ತೆ ಒಂಬತ್ತು ಜನರ ಪಟ್ಟಿಯನ್ನು ಸಲ್ಲಿಸಿದೆ. ಅರುಣ್ ಕುಮಾರ್ ಸಿನ್ಹಾ, ಟೋಮಿನ್ ತಚಂಕರಿ ಮತ್ತು ಸುದೇಶ್ ಕುಮಾರ್ ಮುಂಚೂಣಿಯಲ್ಲಿದ್ದರು.
ಅಕ್ರಮವಾಗಿ ಆಸ್ತಿ ಸಂಪಾದನೆಗೆ ಸಂಬಂಧಿಸಿದ ವಿಜಿಲೆನ್ಸ್ ಪ್ರಕರಣಗಳ ಬಗ್ಗೆ ತಚ್ಚಂಕರಿ ವಿರುದ್ಧ ಆರೋಪವಿದೆ. ಸರ್ಕಾರ ಈ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕÀ, ಯುಪಿಎಸ್‍ಸಿಗೆ ತಚ್ಚಂಕರಿ ವಿರುದ್ಧ ಪ್ರಕರಣಗಳಿವೆ ಎಂದು ಹಲವಾರು ಪತ್ರಗಳು ಬಂದಿದ್ದವು.
ಪ್ರಸ್ತುತ ಬಿ. ಸಂಧ್ಯಾ ಮತ್ತು ಅನಿಲ್ ಕಾಂತ್ ಅವರನ್ನು ಉನ್ನತ ಹುದ್ದೆಗೆ ಪರಿಗಣಿಸುವ ಸಾಧ್ಯತೆ ಹೆಚ್ಚು. ಸುದೇಶ್ ಕುಮಾರ್ ಅವರ ಪುತ್ರಿ ಪೋಲೀಸರನ್ನು ಥಳಿಸಿದ ಪ್ರಕರಣವನ್ನು ಎದುರಿಸುತ್ತಿರುವುದರಿಂದ ಅವರ ಆಯ್ಕೆಯ ಸಾಧ್ಯತೆ ಇಲ್ಲವೆನ್ನಲಾಗಿದೆ.


