ತಿರುವನಂತಪುರ: ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯ ವಿರುದ್ದ ಮಹಿಳಾ ಕಾಂಗ್ರೆಸ್ ಮಾಜಿ ರಾಜ್ಯ ಅಧ್ಯಕ್ಷೆ ಬಿಂದುಕೃಷ್ಣ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪಕ್ಷವೇ ಪೋಲೀಸ್ ಮತ್ತು ನ್ಯಾಯಾಲಯವೆಂದು ಮತ್ತು ತನಗೆ ತೊಂದರೆಯಾದಲ್ಲಿ ಪೋಲೀಸರಿಗೆ ದೂರು ನೀಡುವುದಿಲ್ಲ ಎಂದು ಅವರು ಈ ಹಿಂದೆ ಹೇಳಿದ್ದರು. ಮಹಿಳೆಯರ ವಿರುದ್ದ ಹೇಳಿಕೆ ನೀಡುವುದು ಸ್ವತಃ ಮಹಿಳಾ ಕಮಿಷನ್ ವಾಡಿಕೆಯಂತೆ ಅನುಸರಿಸುತ್ತಿದ್ದಾರೆ. ಯಾವೊಂದು ರಾಜ್ಯದಲ್ಲೂ ಮಹಿಳಾ ಆಯೋಗದ ಅಧ್ಯಕ್ಷರಾಗಿ ಅಧಿಕಾರ ವಹಿಸಿದವರು ಮಹಿಳೆಯರ ವಿರುದ್ದವೇ ತಿರುಗಿಬೀಳುವುದು ಕಂಡುಬಂದಿಲ್ಲ. ಆದರೆ ರಾಜ್ಯದಲ್ಲಿ ಹಿಂದಿನಿಂದಲೂ ಇದು ಪುನರಾವರ್ತಿಸುತ್ತಿರುವುದು ಯಾಕೆಂದು ಬಿಂದುಕೃಷ್ಣ ಕೇಳಿರುವರು.


