ತಿರುವನಂತಪುರ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ.ಜೋಸೆಫೀನ್ ದೂರುದಾರರೊಂದಿಗೆ ಅಗೌರವ ಮತ್ತು ಬೇಜವಾಬ್ದಾರಿಯಿಂದ ಮಾತನಾಡಿದ ಘಟನೆಯ ಬಗ್ಗೆ ಸಿಪಿಎಂ ನಾಯಕತ್ವ ಅಸಮಾಧಾನ ವ್ಯಕ್ತಪಡಿಸಿದೆ. ಈ ಘಟನೆಯನ್ನು ಇಂದು ಸಿಪಿಎಂ ರಾಜ್ಯ ಸಮಿತಿ ಚರ್ಚಿಸಲಿದೆ ಎನ್ನಲಾಗಿದೆ.
ಎಡರಂಗದ ಕಾರ್ಯಕರ್ತರು ಸೇರಿದಂತೆ ಎಲ್ಲೆಡೆಯಲ್ಲಿ ಜೋಸೆಫೀನ್ ಅವರನ್ನು ವ್ಯಾಪಕವಾಗಿ ಟೀಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ತೀವ್ರ ಮುಖಭಂಗವಾದಂತಾಗಿದ್ದು, ಜೋಸೆಫೀನ್ ಅವರ ವಿವರಣೆ ಪಡೆದ ಬಳಿಕ ಸಿಪಿಎಂ ಕ್ರಮ ತೆಗೆದುಕೊಳ್ಳಲಿದೆ ಎಮದು ತಿಳಿದುಬಂದಿದೆ.
ತನ್ನ ಹೇಳಿಕೆಗಳು ಕೆಟ್ಟ ಅರ್ಥದಲ್ಲಿಲ್ಲ, ಆದರೆ ಪ್ರಾಮಾಣಿಕ ಮತ್ತು ಕಾನೂನಾತ್ಮಕವಾದುದು ಎಂದು ಜೋಸೆಫೀನ್ ಮಾಧ್ಯಮಗಳಿಗೆ ತಿಳಿಸಿರುವರು.
ಏತನ್ಮಧ್ಯೆ, ಜೋಸೆಫೀನ್ ಅವರು ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು. "ನಾನು ತಾಯಿಯ ಸಲುಗೆಯಲ್ಲಿ ಆ ಮಹಿಳೆಯಲ್ಲಿ ಈವರೆಗೆ ಯಾಕೆ ಪೋಲೀಸರಿಗೆ ದೂರು ನೀಡಲಿಲ್ಲ ಎಂದು ಕೇಳಿದೆ. ಹುಡುಗಿಯರು ಧೈರ್ಯದಿಂದ ದೂರು ನೀಡಲು ಮುಂದೆ ಬರತ್ತಿಲ್ಲ ಎಂದು ನಾನು ಆಕ್ರೋಶಗೊಂಡಿದ್ದೇನೆ. ಆದರೆ ನಂತರ ನಾನು ಅದರ ಬಗ್ಗೆ ಯೋಚಿಸಿದಾಗ ನನಗೆ ಅರಿವಾಯಿತು ನಾನು ಹಾಗೆ ಹೇಳಬಾರದಿತ್ತೆಂದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


