ತಿರುವನಂತಪುರ: ಕೊರೋನಾ ಲಸಿಕೆ ತೆಗೆದುಕೊಂಡವರಿಗೆ ರಾಜ್ಯ ಸರ್ಕಾರ ಮಹತ್ತರ ಪರಿಹಾರವೊಂದನ್ನು ಪ್ರಕಟಿಸಿದೆ. ಕೋವಿಡ್ ಲಸಿಕೆಯ ಎರಡೂ ಪ್ರಮಾಣವನ್ನು ಪಡೆದವರಿಗೆ ಇನ್ನು ಮುಂದೆ ಆರ್‍ಟಿಪಿಸಿಆರ್ ನಕಾರಾತ್ಮಕ ಪ್ರಮಾಣಪತ್ರ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಆದೇಶ ಹೊರಡಿಸಿದೆ.
ಆರ್‍ಟಿಪಿಸಿಆರ್ ನಕಾರಾತ್ಮಕ ಪ್ರಮಾಣಪತ್ರದ ಬದಲು ವ್ಯಾಕ್ಸಿನೇಷನ್ ಪ್ರಮಾಣಪತ್ರ ಸಾಕು. ಪ್ರಸ್ತುತ, ಆರ್‍ಟಿಪಿಸಿಆರ್ ಪ್ರಮಾಣಪತ್ರದ ಅಗತ್ಯವಿರುವ ಎಲ್ಲಾ ವಿಷಯಗಳಿಗೆ ವಿನಾಯಿತಿ ಅನ್ವಯಿಸುತ್ತದೆ. ಇತರ ರಾಜ್ಯಗಳಿಂದ ಕೇರಳಕ್ಕೆ ಬರುವವರಿಗೆ ಈ ವಿನಾಯಿತಿ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದುರಂತ ನಿವಾರಣಾ ಇಲಾಖೆಯ ಶುಕ್ರವಾರ ಈ ಆದೇಶ ಜಾರಿಗೆ ತoದಿದೆ.





