ತಿರುವನಂತಪುರಂ: ರಾಜ್ಯದಲ್ಲಿ ಇಂದು 30,007 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 3872, ಕೋಝಿಕ್ಕೋಡ್ 3461, ತ್ರಿಶೂರ್ 3157, ಮಲಪ್ಪುರಂ 2985, ಕೊಲ್ಲಂ 2619, ಪಾಲಕ್ಕಾಡ್ 2261, ತಿರುವನಂತಪುರ 1996, ಕೊಟ್ಟಾಯಂ 1992, ಕಣ್ಣೂರು 1939, ಆಲಪ್ಪುಳ 1741, ಪತ್ತನಂತಿಟ್ಟ 1380, ವಯನಾಡ್ 1161, ಇಡುಕ್ಕಿ 900 ಮತ್ತು ಕಾಸರಗೋಡು 613 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,66,397 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.18.03 ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನಾಟ್, ಟ್ರೂನಾಟ್, ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 3,07,85,443 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 162 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 20,134 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 128 ಮಂದಿ ರಾಜ್ಯದ ಹೊರಗಿಂದ ಬಂದÀವರು. 28,650 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 1195 ಮಂದಿಯ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ಎರ್ನಾಕುಳಂ 3810, ಕೋಝಿಕ್ಕೋಡ್ 3425, ತ್ರಿಶೂರ್ 3134, ಮಲಪ್ಪುರಂ 2877, ಕೊಲ್ಲಂ 2608, ಪಾಲಕ್ಕಾಡ್ 1548, ತಿರುವನಂತಪುರ 1890, ಕೊಟ್ಟಾಯಂ 1848, ಕಣ್ಣೂರು 1825, ಆಲಪ್ಪುಳ 1705, ಪತ್ತನಂತಿಟ್ಟ 1357, ವಯನಾಡ್ 1141, ಇಡುಕ್ಕಿ 889 ಮತ್ತು ಕಾಸರಗೋಡು 593 ಎಂಬಂತೆ ಸಂಪರ್ಕದಿಂದ ಸೋಂಕಿಗೆ ತುತ್ತಾಗಿದ್ದಾರೆ.
ಇಂದು 104 ಮಂದಿ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಪತ್ತೆಯಾಗಿದೆ. ಕಣ್ಣೂರು 28, ವಯನಾಡು 14, ಕಾಸರಗೋಡು 13, ಪಾಲಕ್ಕಾಡ್ 11, ತ್ರಿಶೂರ್ 10, ಕೊಲ್ಲಂ 8, ಪತ್ತನಂತಿಟ್ಟ 7, ತಿರುವನಂತಪುರ, ಆಲಪ್ಪುಳ ತಲಾ 3, ಇಡುಕ್ಕಿ, ಎರ್ನಾಕುಳಂ, ಕೋಝಿಕ್ಕೋಡ್ 2 ಮತ್ತು ಕೊಟ್ಟಾಯಂ 1 ಎಂಬಂತೆ ಸೋಂಕು ದೃಢಪಟ್ಟಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 18,997 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1019, ಕೊಲ್ಲಂ 1134, ಪತ್ತನಂತಿಟ್ಟ 516, ಅಲಪ್ಪುಳ 855, ಕೊಟ್ಟಾಯಂ 1158, ಇಡುಕ್ಕಿ 652, ಎರ್ನಾಕುಳಂ 2136, ತ್ರಿಶೂರ್ 2204, ಪಾಲಕ್ಕಾಡ್ 2165, ಮಲಪ್ಪುರ 2656, ಕೋಝಿಕ್ಕೋಡ್ 2366, ವಯನಾಡ್ 470, ಕಣ್ಣೂರು 1341 ಮತ್ತು ಕಾಸರಗೋಡು 325 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,81,209 ಮಂದಿ ಜನರಿಗೆ ಸೋಂಕು ಪತ್ತೆಯಾಗಿದೆ ಮತ್ತು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 37,11,625 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,87,246 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,59,821 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 27,425 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2890 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ ಆಧಾರದ ಮೇಲೆ ವರ್ಗೀಕರಿಸಲಾಗಿದೆ. 68 ಸ್ಥಳೀಯ ಸಂಸ್ಥೆಗಳಲ್ಲಿ 346 ವಾರ್ಡ್‍ಗಳಲ್ಲಿ ಟಿಪಿಆರ್ 8 ಕ್ಕಿಂತ ಹೆಚ್ಚಿದ್ದು ಕಠಿಣ ನಿಯಂತ್ರಣ ಇರುತ್ತದೆ.



