HEALTH TIPS

ಮನೆಯೊಳಗೆ ಪಾಸಿಟಿವ್ ವೈಬ್ಸ್ ಇರಬೇಕಾ? ಹಾಗಾದ್ರೆ ಈ ವಸ್ತುಗಳಲ್ಲಿ ಯಾವುದಾದರೊಂದನ್ನು ಇಡಿ..

                  ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯೂ ನೆಗೆಟಿವ್ ಶಕ್ತಿಗಳೇ ತುಂಬಿಕೊಂಡಿವೆ. ಒತ್ತಡದ ಜೀವನದ ಜೊತೆಗೆ ಇನ್ನೊಬ್ಬರ ಮೇಲಿರುವ ಹೊಟ್ಟೆಕಿಚ್ಚು, ತಾತ್ಸಾರದ ಮನೋಭಾವನೆ. ಆದರೆ ಇವೆಲ್ಲವಿಂದ ದೂರವಿದ್ದು, ಸಕಾರಾತ್ಮಕ ಆಲೋಚನೆ ಬೆಳೆಸಿಕೊಳ್ಳವುದು ಒಂದು ಸವಾಲಿನ ಕೆಲಸ. ಅದಕ್ಕಾಗಿ ಧ್ಯಾನ, ವ್ಯಾಯಾಮದಂತಹ ಚಟುವಟಿಗಳ ಅಗತ್ಯವಿದೆ. ಇವುಗಳ ಜೊತೆಗೆ ಮನೆಯ ಅಲಂಕಾರವೂ ಸಹ ನಮ್ಮಲ್ಲಿ ಧನಾತ್ಮಕತೆ ಸೃಷ್ಟಿ ಮಾಡಬಲ್ಲದು.

              ಆದ್ದರಿಂದ ಇಲ್ಲಿ ನಾವು ಮನಸ್ಸಿನ ನೆಗೆಟಿವ್ ಆಲೋಚನೆಗಳನ್ನು ದೂರಮಾಡಿ, ಪಾಸಿಟಿವ್ ಮನಸ್ಥಿತಿ ನಮ್ಮದಾಗಲು ಮನೆಯಲ್ಲಿ ಇಡಬಹುದಾದ ಕೆಲವು ಉತ್ತಮ ವಸ್ತುಗಳ ಬಗ್ಗೆ ಹೇಳಿದ್ದೇವೆ,


                   ಮೀನು: ತಜ್ಞರ ಪ್ರಕಾರ, ಮೀನು ಸಮೃದ್ಧಿಯನ್ನು ತರಲು ಬಹಳ ಪ್ರಸಿದ್ಧವಾಗಿದೆ. ಇದು ಸಮೃದ್ಧಿಯ ಜೊತೆಗೆ ಉತ್ತಮ ಆರೋಗ್ಯದ ಸಂಕೇತವಾಗಿದೆ. ನಿಮಗಿಷ್ಟವಾದ ಮಾರುಕಟ್ಟೆಯಲ್ಲಿ ಸಿಗುವ ಮೀನಿನ ಪ್ರತಿಮೆಯನ್ನು ಗೋಡೆಯ ಮೇಲೆ ನೇತುಹಾಕಬಹುದು. ಇದರ ಜೊತೆಗೆ ಅಕ್ವೇರಿಯಂ ಸಹ ಇಟ್ಟುಕೊಳ್ಳಬಹುದು, ಆದರೆ ಮೀನುಗಳನ್ನು ನೋಡಿಕೊಳ್ಳುವ ಮತ್ತು ಟ್ಯಾಂಕ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವವರಿಗೆ ಮಾತ್ರ ಇದು ಸೂಕ್ತ.
           ಆನೆ: ವಿವಿಧ ರೂಪಗಳಲ್ಲಿ ಸಿಗುವ ಆನೆಯ ಚಿತ್ರ ಅಥವಾ ಪ್ರತಿಮೆಯು ಅದೃಷ್ಟವನ್ನು ಆಕರ್ಷಿಸುತ್ತದೆ. ಇದು ಸಂಪತ್ತು, ಬುದ್ಧಿವಂತಿಕೆ, ರಕ್ಷಣೆ, ನಿಷ್ಠೆಯ ಸಂಕೇತವಾಗಿದ್ದು, ಮನೆಯೊಳಗೆ ಇಟ್ಟರೆ ಉತ್ತಮವಾಗಿದೆ. ಒಂದು ವೇಳೆ ಪ್ರತಿಮೆ ಪಡೆಯಲು ಸಾಧ್ಯವಾದದ್ದರೆ, ಕುಶನ್ ಅಥವಾ ಕುಶನ್ ಕವರ್ ಆದರೂ ಖರೀದಿಸಬಹುದು.
            ಗಿಡಮೂಲಿಕೆಗಳು: ತಮ್ಮ ಕುಟುಂಬದ ಅದೃಷ್ಟಕ್ಕಾಗಿ ಅನೇಕ ಜನರು ಗಿಡಮೂಲಿಕೆಗಳನ್ನು ಮತ್ತು ವಿವಿಧ ಸಸ್ಯಗಳನ್ನು ಮನೆಯೊಳಗೆ ಇಡುತ್ತಾರೆ. ಇದು ಅದೃಷ್ಟದ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಆದ್ದರಿಂದ ಗಿಡದ ಬಗ್ಗೆ ಚೆನ್ನಾಗಿ ತಿಳಿದುಕೊಂಡು, ಅಲರ್ಜಿ ಇಲ್ಲದ ಗಿಡಗಳನ್ನು ಮನೆಯೊಳಗೆ ಇಡಿ. ಇದಕ್ಕಾಗಿ ನಿಮಗೆ ಅಲೋವೆರಾ, ಮನಿಪ್ಲಾಂಟ್ ಉತ್ತಮ ಸಸ್ಯಗಲಾಗಿದ್ದು, ಕಡಿಮೆ ನಿರ್ವಹಣೆಯ ಅವಶ್ಯಕತೆ ಇರುತ್ತದೆ.


            ಡ್ರೀಮ್ ಕ್ಯಾಚರ್: ಇದೊಂದು ವಿದೇಶಿ ಪರಿಕಲ್ಪನೆಯಾಗಿದ್ದರೂ ಸಹ ಭಾರತೀಯರು ಇದನ್ನು ಪ್ರೀತಿಸುತ್ತಾರೆ, ಏಕೆಂದರೆ ಅವುಗಳ ಸೌಂದರ್ಯದ ಜೊತೆಗೆ ಸಕಾರಾತ್ಮಕತೆಯನ್ನು ಹೊತ್ತು ತರುವುದರಿಂದ. ವಿವಿಧ ಡಿಸೈನ್ ನಲ್ಲಿ ಬರುವ ಈ ಡ್ರೀಮ್ ಕ್ಯಾಚರ್ ನ್ನು ಮನೆಯೊಳಗೆ ಇಡುವುದರಿಂದ, ಮನೆಯೂ ಕಲಾತ್ಮಕವಾಗಿ ಕಾಣುವುದು.

             ಹರಳುಗಳು: ಇದು ಅದೃಷ್ಟ, ಪ್ರೀತಿ, ಸಂತೋಷದ ಸಂಕೇತವಾಗಿದ್ದು, ಒತ್ತಡವನ್ನು ನಿವಾರಿಸಲು ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಗುಲಾಬಿ ಬಣ್ಣದ ಸ್ಫಟಕಳಂತಹ ಶಿಲೆಗಳನ್ನು ಇಡಬಹುದು.
          ಹಂಸ ಕೈ: ನಕಾರಾತ್ಮಕತೆ ನಿವಾರಣೆ ಮಾಡುವ ಅತ್ಯಂತ ಪ್ರಸಿದ್ಧವಾದ ಅಲಂಕಾರಿಕ ವಸ್ತುವೆಂದರೆ ಈ ಹಂಸ ಕೈ ಅಥವಾ ಹಂಸ ಹ್ಯಾಂಡ್. ಇದು ಮನೆಯ ಅಲಂಕಾರಕ್ಕೂ ಉತ್ತಮಾಗಿದ್ದು, ನೀವು ಅವುಗಳನ್ನು ನೇತುಹಾಕಬಹುದು, ಆ ರೀತಿಯ ಬಟ್ಟೆಯನ್ನು, ದಿಂಬಿನ ಕವರ್, ಬೆಡ್ ಕವರ್ ಖರೀದಿಸಬಹುದು ಅಥವಾ ಲೋಹದ ಪ್ರತಿಮೆ ಇತ್ಯಾದಿಗಳ ರೂಪದಲ್ಲಿಯೂ ಇಡಬಹುದು. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಇಟ್ಟುಕೊಳ್ಳಬಹುದು.


           ಬುದ್ಧನ ಪ್ರತಿಮೆ: ಇದೊಂದು ಸಾಮಾನ್ಯವಾಗಿ ಹೆಚ್ಚಿನ ಮನೆಯಲ್ಲಿ ಕಂಡುಬರುವ ವಸ್ತುವಾಗಿದೆ. ಭಗವಾನ್ ಬುದ್ಧನ ಪ್ರತಿಮೆ ಅಥವಾ ನಗುವ ಬುದ್ಧನ ಪ್ರತಿಮೆ ಮನೆಗೆ ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಹಲವರದ್ದು.
         ತಾಜಾ ಹೂವುಗಳು: ಬಾಡಿದ ಅಥವಾ ಪ್ಲಾಸ್ಟಿಕ್ ಹೂವುಗಳಿಗಿಂತ ತಾಜಾ ಹೂವುಗಳು ನಿಮ್ಮ ಮನೆಗೆ ಸಂತೋಷ ಮತ್ತು ಚೈತನ್ಯವನ್ನು ತರುತ್ತವೆ. 
           ಧೂಪ: ನಿಮ್ಮ ಮನೆಯೊಳಗೆ ಧೂಪವನ್ನು ಹಾಕುವುದರಿಂದ ಮನೆಯೊಳಗಿರುವ ನಕಾರಾತ್ಮಕತೆಯನ್ನು ಹೊರಹಾಕಬಹುದು. ಇದರ ಸುಗಂಧವು ಉತ್ತಮ ಮನಸ್ಥಿತಿಯನ್ನು ನೀಡಿ, ಪಾಸಿಟಿವ್ ಆಲೋಚನೆಗಳಿಗೆ ದಾರಿಮಾಡಿಕೊಡುತ್ತದೆ. 
            ಆಮೆ: ಕೆಲವು ಜನರು ಆಮೆಗಳನ್ನು ಸಾಕುತ್ತಾರೆ, ಆದರೆ ಅವುಗಳನ್ನು ನಿರ್ವಹಿಸುವುದು ಸುಲಭವಲ್ಲ ಎಂಬುದನ್ನು ನೆನಪಿನಲ್ಲಿಡಿ. ಆಮೆ ಚಿತ್ರವಿರುವ ಮುದ್ರಣಗಳು ಅಥವಾ ಲೋಹೀಯ ಪ್ರತಿಮೆಗಳನ್ನು ಇಟ್ಟು ಮನೆಯ ಅಲಂಕಾರ ಮಾಡುವುದು ಉತ್ತಮ. 
            ಹಣ್ಣಿನ ಬಟ್ಟಲು: ನೀವು ದಾಳಿಂಬೆ ಮತ್ತು ಇತರ ಸಿಟ್ರಸ್ ಹಣ್ಣುಗಳಿಂದ ತುಂಬಿದ ಹಣ್ಣಿನ ಬುಟ್ಟಿಯನ್ನು ಮನೆಯೊಳಗೆ ಇಟ್ಟುಕೊಂಡರೆ, ಅದು ಉತ್ತಮ ಆರೋಗ್ಯವನ್ನು ನೀಡುತ್ತದೆ ಮತ್ತು ಶ್ರೀಮಂತಿಕೆಯನ್ನು ತರುತ್ತದೆ ಎಂದು ನಂಬಲಾಗಿದೆ. 
            ನೀಲಿ ಬಟ್ಟೆ: ನೀಲಿ ಬಣ್ಣವು ದುರಾದೃಷ್ಟವನ್ನು ದೂರ ಮಾಡುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಅದೃಷ್ಟಕ್ಕಾಗಿ ನೀಲಿ ಸ್ಕರ್ಟ್, ಕುರ್ತಾ, ದುಪಟ್ಟಾ, ಟೀ ಶರ್ಟ್ ಅಥವಾ ಯಾವುದನ್ನಾದರೂ ಧರಿಸಬಹುದು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries