ಕೊಚ್ಚಿ: ವೃದ್ಧ ಮಹಿಳೆಗೆ ಅರ್ಧ ಗಂಟೆಯೊಳಗೆ ಎರಡು ಬಾರಿ ಕೊರೋನಾ ಲಸಿಕೆ ಹಾಕಲಾಗಿದೆ ಎಂದು ದೂರು ದಾಖಲಾಗಿದೆ. ದೂರಿನ ಪ್ರಕಾರ, ಒಮ್ಮೆ ಲಸಿಕೆ ಪಡೆದು ವಿಶ್ರಾಂತಿ ಪಡೆದ ಬಳಿಕ, ಮನೆಗೆ ತೆರಳುವ ಮೊದಲು ಶೂ ಹಾಕಲು ಒಳಗೆ ತೆರಳಿದಾಗ ಅವರಿಗೆ ಮತ್ತೊಮ್ಮೆ ಚುಚ್ಚುಮದ್ದು ನೀಡಲಾಯಿತು ಎಂದು ದೂರಲಾಗಿದೆ.
83 ವರ್ಷದ ಮಹಿಳೆ ಎರ್ನಾಕುಳಂ ಶ್ರೀಮುಲನಗರಂ ಸರ್ಕಾರಿ ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಈ ಘಟನೆ ನಡೆದಿದೆ. ವಯೋವೃದ್ದೆಯಾದ ಕೋವಿಡ್ ಎರಡನೇ ಡೋಸ್ ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದಿದ್ದರು.
ಲಸಿಕೆ ಪಡೆದು ಅರ್ಧ ಗಂಟೆ ವಿಶ್ರಾಂತಿ ಬಳಿಕ ಶೂಗಳನ್ನು ಹಾಕಿಕೊಳ್ಳಲು ಮತ್ತೆ ಒಳಗೆ ಹೋದಾಗ ಎರಡನೇ ಬಾರಿಗೆ ಲಸಿಕೆ ಚುಚ್ಚಲಾಯಿತು. ವೃದ್ದೆ ತನಗೆ ಈಗಾಗಲೇ ಲಸಿಕೆ ಹಾಕಲಾಗಿದೆ ಎಂದು ವಿನಂತಿಸಿದರೂ ಆಸ್ಪತ್ರೆ ಅಧಿಕಾರಿಗಳು ಕೇಳಲು ನಿರಾಕರಿಸಿದರು. ಎರಡನೇ ಡೋಸ್ ನ್ನು ಎರಡು ಬಾರಿ ತೆಗೆದುಕೊಂಡ ಸ್ವಲ್ಪ ಹೊತ್ತಲ್ಲಿ ಅಸ್ವಸ್ಥರಾಗುತ್ತಾರೆ ಎಂಬ ವಾದಗಳಿದ್ದರೂ ಈ ವೃದ್ದೆಗೆ ಯಾವುದೇ ಇತರ ಸಮಸ್ಯೆಗಳು ವರದಿಯಾಗಿಲ್ಲ.


