HEALTH TIPS

ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕಾಸರಗೋಡು ಇ.ಎಂ.ಎಲ್. ಕಂಪನಿ ಇನ್ನು ಸಾರ್ವಜನಿಕ ಸಂಸ್ಥೆಯಾಗಿ ಉನ್ನತಿಗೆ: ಮುಖ್ಯಮಂತ್ರಿ

    

                ಕುಂಬಳೆ: ಕೇಂದ್ರ ಸಾರ್ವಜನಿಕ ವಲಯದ ಶೇ 51 ಪಾಲುದಾರಿಕೆ ಯನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳುವ ಮೂಲಕ ಕಾಸರಗೋಡಿನ ಇಲೆಕ್ಟ್ರಿಕಲ್ ಮೆಷಿನ್ಸ್ ಲಿಮಿಟೆಡ್ ಸಂಸ್ಥೆಯನ್ನು(ಇ.ಎಂ.ಎಲ್) ಮತ್ತೆ ಸಾರ್ವಜನಿಕ ಸಂಸ್ಥೆಯಾಗಿ ಉನ್ನತೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. 

               ಕಾಸರಗೋಡು ಬೆದ್ರಡ್ಕದ ಭೆಲ್ ಇ.ಎಂ.ಎಲ್. ಕಂಪನಿ ವಹಿಸಿಕೊಳ್ಳುವ ಘೋಷಣೆ ನಡೆಸಿ ಅವರು ಮಾತನಾಡಿದರು. 

     ಟ್ರಾಕ್ಷನ್ ಮೋಟಾರುಗಳು, ಕಂಟ್ರೋಲರ್ ಗಳು, ರೈಲ್ವೇ, ಪ್ರತಿರೋಧ ವಲಯಗಳಿಗೆ ಅಗತ್ಯವಿರುವ ಆಲ್ಟರ್ ನೆಟ್ ಗಳು, ವಿದ್ಯುತ್ ವಲಯಕ್ಕೆ ಅಗತ್ಯವಿರುವ ಸ್ಟ್ರೀಟ್ ಲೈಟ್ ಕಂಟ್ರೋಲರ್ ಸಹಿತ ಉತ್ಪನ್ನಗಳ ಮಾದರಿ ನಿರ್ಮಾಣ ಸಂಸ್ಥೆಯಾಗಿ ಇ.ಎಂ.ಎಲ್.ನ್ನು ಪ್ರಗತಿಗೊಳಿಸಲಾಗುವುದು ಎಂದವರು ತಿಳಿಸಿದರು. 

          ಉನ್ನತೀಕರಣಕ್ಕೆ  43 ಕೋಟಿ ರೂ., ಆರ್ಥಿಕ ಹೊರೆಯಾಗಿರತುವ 34 ಕೋಟಿ ರೂ. ಸೇರಿ ಒಟ್ಟು 77 ಕೋಟಿ ರೂ. ವೆಚ್ಚಮಾಡಿ ರಾಜ್ಯಸರ್ಕಾರ ಈ ಕಂಪನಿಯನ್ನು ವಹಿಸಿಕೊಂಡಿದೆ. ಕಳೆದ 2 ವರ್ಷಗಳಿಂದ ಈ ಸಂಸ್ಥೆಯ ಸಿಬ್ಬಂದಿಗೆ ವೇತನ ಲಭಿಸದೇ ಇರುವ ಹಿನ್ನೆಲೆಯಲ್ಲಿ 14 ಕೋಟಿ ರೂ. ನ್ನು ವೇತನ ರೂಪದಲ್ಲಿ ಒದಗಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. 

           ಈ ಹಿಂದೆ ರಾಜ್ಯ ಸಾರ್ವಜನಿಕ ಸಂಸ್ಥೆಯಾಗಿದ್ದ ಕಾಸರಗೋಡಿನ ಇ.ಎಂ.ಎಲ್. ಕಂಪನಿಯ ಶೇ 51 ಶೇರುಗಳನ್ನು ನವರತ್ನ ಕಂಪನಿಯಾಗಿರುವ ಭೆಲ್ ಗೆ ಹಸ್ತಾಂತರಿಸಲಾಗಿದೆ. ಜಂಟಿ ಉದ್ದಿಮೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ವೈವಿಧ್ದೀಕರಣದ ನೀರಿಕ್ಷೆಗಳಿದ್ದರೂ, ಪರಿಣಾಮಕಾರಿಯಾಗಿರಲಿಲ್ಲ. ಎಲ್ಲ ಸಾರ್ವಜನಿಕ ಸಂಸ್ಥೆಗಳನ್ನು ಲಾಭದಾಯಕವಾಗಿಸುವುದು ರಾಜ್ಯ ಸರ್ಕಾರದ ಉದ್ದೇಶ ಎಂದವರು ನುಡಿದರು. 

             ರಾಜ್ಯ ಸರ್ಕಾರದ ನೂರು ದಿನಗಳ ಕ್ರಿಯಾ ಯೋಜನೆ ಅಂಗವಾಗಿ ಕಾಸರಗೋಡಿನ ಇ.ಎಂ.ಎಲ್. ನ್ನು ಮುಂದೆ ರಾಜ್ಯದ ಸಾರ್ವಜನಿಕ ಸಂಸ್ಥೆಯಾಗಲಿದೆ. 2011 ವರೆಗೆ ರಾಜ್ಯ ಸಾರ್ವಜನಿಕ ಸಂಸ್ಥೇಯೇ ಆಗಿದ್ದ ಸಂಸ್ಥೇ 5 ಕೋಟಿ ರೂ.ನ ಲಾಭ ತಂದಿತ್ತು. ನಂತರ ಶೇ 51 ಶೇರುಗಳನ್ನು ನವರತ್ನ ಕಂಪನಿ ವಹಿಸಿಕೊಂಡಿತ್ತು. ಆದರೆ ನಿರೀಕ್ಷೆಗಳೆಲ್ಲವೂ ಬುಡಮೇಲಾದುವು. 2019 ಸೆ.5ರಂದು ಸಂಸ್ಥೆಯನ್ನು ಮರಳಿ ಪಡೆದುಕೊಳ್ಳಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries