ಕಾಸರಗೋಡು: ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕುಟುಂಬ ಆರೋಗ್ಯ ಕೇಂದ್ರವಾಗಿಸಿ ಬಡ್ತಿಗೊಳಿಸಲಾಗಿದೆ.
ರಾಜ್ಯ ಸರಕಾರದ ನೂರು ದಿನಗಳ ಕ್ರಿಯಾ ಕಾರ್ಯಕ್ರಮ ಅಂಗವಾಗಿ ಈ ಅಭಿವೃದ್ಧಿ ನಡೆಸಲಾಗಿದೆ.
ಕೋವಿಡ್ ಕಟ್ಟುನಿಟ್ಟು ಹಿನ್ನೆಲೆಯಲ್ಲಿ ನಡೆದ ಸಮಾರಂಭವನ್ನು ಆರೋಗ್ಯ ಸಚಿವೆ ವೀಣಾ ಜಾರ್ಜ್ ಉದ್ಘಾಟಿಸಿದರು. ಶಾಸಕ ಎನ್,ಎ,ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮಾಥ್ಯೂ ಮುಖ್ಯ ಅತಿಥಿಗಳಾಗಿದ್ದರು. ಕುಂಬಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಮೀದ್ ಪೆÇಸಳಿಕೆ, ಉಪಾಧ್ಯಕ್ಷೆ ಎಲಿಝಬೆತ್ ಕ್ರಾಸ್ತಾ, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಅಬ್ದುಲ್ ರಝಾಕ್, ಖದೀಜಾ, ಸಂಜೀವ ಶೆಟ್ಟಿ, ಕಾರ್ಯದರ್ಶಿ ಹರೀಶ್, ಜಿಲ್ಲಾ ವೈದ್ಯಾಧಿಕಾರಿ ಅವರ ಪ್ರತಿನಿಧಿ ಡಾ.ನಿರ್ಮಲ್, ಜಿಲ್ಲಾ,ಬ್ಲೋಕ್ ಪಂಚಾಯತ್ ಸದಸ್ಯರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು. ಆರೋಗ್ಯ ಕುಟುಂಬ ಕಲ್ಯಾಣ ಪ್ರಧಾನ ಕಾರ್ಯದರ್ಶಿ ಡಾ.ರಾಜನ್ ಖೋಬ್ರಗಡೆ ಸ್ವಾಗತಿಸಿದರು.
ಆರೋಗ್ಯ ಇಲಾಖೆ ಅಭಿವೃದ್ಧಿಯ ಹಾದಿಯಲ್ಲಿದೆ: ಸಚಿವೆ ವೀಣಾ ಜಾರ್ಜ್
ಆರೋಗ್ಯ ಇಲಾಖೆ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ಇಲಾಖೆ ಸಚಿವೆ ವೀಣಾ ಜಾರ್ಜ್ ಅಭಿಪ್ರಾಯಪಟ್ಟರು.
ಆರೋಗ್ಯ ಇಲಾಖೆಯ 158 ಆರೋಗ್ಯ ಸಂಸ್ಥೇಗಳಲ್ಲಿ 16.69 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಿದ ವಿವಿಧ ಯೋಜನೆಗಳನ್ನು ಆನ್ ಲೈನ್ ರೂಪದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಸಂದಿಗ್ಧತೆಗಳ ಸಹಿತ 100 ದಿನಗಳು ಸಾಗಿ ಹೋಗಿವೆ. ಕೋವಿಡ್ ಸಿಕಾ ದಿಂದ ತೊಡಗಿ ನಿಫದ ವರೆಗೆ ಅನೇಕ ರೋಗಗಳು ರಾಜ್ಯವನ್ನು ಕಂಗೆಡಿಸಿದುವು. ಆದರೆ ಒಗಟ್ಟಿನ ಫಲವಾಗಿ, ವೈಜ್ಞಾನಿಕ ಪ್ರತಿರೋಧ ಚಟುವಟಿಕೆಗಳ ಸಹಿತ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ವಿಸ್ತೃತ ಅಭಿವೃದ್ಧಿಯನ್ನು ಆರೋಗ್ಯ ಇಲಾಖೆ ಕಂಡಿದೆ. ಇದರ ಸಂಕೇತಗಳೇ ಇಲ್ಲಿ ಜಾರಿಗೊಂಡಿರುವ ಯೋಜನೆಗಳ ಉದ್ಘಾಟನೆ ಎಂದವರು ನುಡಿದರು.






