ಕುಂಬಳೆ : ಸರ್ಕಾರಿ ಕಚೇರಿಗಳಲ್ಲಿನ ಕೆಲಸದ ಹೊರೆಯಿಂದ ಕಷ್ಟಪಡುತ್ತಿರುವ ಮಹಿಳಾ ಉದ್ಯೋಗಿಗಳಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಬೇಕು ಎಂದು ಕೇರಳ ಎನ್ ಜಿ ಒ ಸಂಘ ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಆರ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಕಚೇರಿ ಮೇಲಧಿಕಾರಿಗಳು ಮತ್ತು ರಾಜಕಾರಣಿಗಳ ಒತ್ತಡವಿಲ್ಲದೆ ಸುರಕ್ಷಿತವಾಗಿ ಕೆಲಸ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯು ಈಗ ಅಸ್ತಿತ್ವದಲ್ಲಿರುವುದು.
ನೂತನ ಪಿಂಚಣಿ ಯೋಜನೆಯನ್ನು ಹಿಂತೆUಯಬೇಕು, ಲೀವ್ ಸರಂಡರ್ ಗೆ ಅನುಮತಿ ನೀಡಬೇಕು, ಆರೋಗ್ಯ ವಿಮೆಯನ್ನು ಜಾರಿಗೊಳಿಸಬೇಕು, ವೇತನ ಪರಿಷ್ಕರಣೆಯಲ್ಲಿನ ತಪ್ಪುಗಳನ್ನು ಸರಿಪಡಿಸಬೇಕು, ವರ್ಗ 4 ರ ಉದ್ಯೋಗಿಗಳಿಗೆ 40ಶೇ. ಡಿಪಾಟ್ಮೆರ್ಂಟ್ ಪ್ರೊಮೋಶನ್ ಅನುಮತಿಸಬೇಕು, ಸ್ಥಳಾಂತರ ಮಾನದಂಡಗಳನ್ನು ಸ್ವಾಟ್ಯೂಟರಿ ಮಾಡಬೇಕು ಎಂಬಿತ್ಯಾದಿ ಎಲ್ಲಾ ಅವಶ್ಯಕತೆಗಳನ್ನು ಮುಂದಿಟ್ಟುಕೊಂಡು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಕೇರಳ ಎನ್ ಜಿ ಒ ಸಂಘದ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನಾ ಧರಣಿಯ ಅಂಗವಾಗಿ ಕುಂಬಳೆ ಗ್ರಾಮ ಪಂಚಾಯತಿ ಎದುರು ಶುಕ್ರವಾರ ನಡೆದ ಧರಣಿ ಆಂದೋಲನವನ್ನು ಅವರು ಉದ್ಘಾಟಿಸಿದರು.
ಎನ್ ಜಿ ಒ ಸಂಘದ ರಾಜ್ಯ ಸಮಿತಿ ಸದಸ್ಯ ಎಂ ಗಂಗಾಧರ ಅಧ್ಯಕ್ಷತೆ ವಹಿಸಿದ್ದರು. ರವಿಕುಮಾರ್ ಶಶಿ ಪಿ ಎಸ್, ಸಂತೋಷ್, ಸುರೇಶ್ ನಾಯಕ್ ಮತ್ತು ಶಂಕರ ಗೌಡ ನೇತೃತ್ವ ವಹಿಸಿದ್ದರು.


