ಕುಂಬಳೆ: ಬಂದ್ಯೋಡು ವೆಲ್‍ಕೇರ್ ಮಲ್ಟಿಸ್ಪೆಶಾಲಿಟಿ ಚಿಕಿತ್ಸಾಲಯದ ಆಶ್ರಯದಲ್ಲಿ ಸೆಪ್ಟೆಂಬರ್ 27 ರಂದು ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುವುದು ಎಂದು ಮೂಲಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚಿಕಿತ್ಸಾಲಯದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ನಡೆಯಲಿರುವ ವೈದ್ಯಕೀಯ ಶಿಬಿರದಲ್ಲಿ ಇಎನ್ ಟಿ, ಮಕ್ಕಳ ವೈದ್ಯರು, ಮೂಳೆ ತಜ್ಞರು ಮತ್ತು ಸಾಮಾನ್ಯ ವೈದ್ಯರ ಸೇವೆಗಳನ್ನು ಒದಗಿಸಲಾಗುವುದು. ಹಿಜಾಮ, ಔಷಧದ ಪಾರಂರಿಕ ಚಿಕಿತ್ಸೆಯೂ ಲಭ್ಯವಿದೆ.
ವ್ಯವಸ್ಥಾಪಕ ನಿರ್ದೇಶಕ ಡಾ. ಜಿತಿನ್ ಮೋಹನನ್, ಮುಹಮ್ಮದ್ ಬಂದ್ಯೋಡು, ಪ್ರಸಿದ್ಧ ಹಿಜಾಮ ಚಿಕಿತ್ಸಕ ಕೆ. ಅಬ್ದುಲ್ ಹಮೀದ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.


