ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಕಾಸರಗೋಡು ಡಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಿಕೆ ಫೈಸಲ್ ಅವರಿಗೆ ಅಭಿನಂದನೆ ಕಾರ್ಯಕ್ರಮ ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ನಾರಾಯಣ ಮಣಿಯಾಣಿ ವಹಿಸಿದ್ದರು. ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಪಿಕೆ ಫೈಸಲ್ ಅವರು, ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ತಳಮಟ್ಟದಿಂದಲೇ ಕೇಡರ್ ಪಕ್ಷವಾಗಿ ಬಲಪಡಿಸಲಾಗುವುದು. ದೇಶಕ್ಕೆ ಕಾಂಗ್ರೆಸ್ಸಿನ ಕೊಡುಗೆ ಅಪಾರವಾಗಿದೆ. ಕಾಂಗ್ರೆಸ್ ದೇಶಕ್ಕೆ ಕೊಟ್ಟ ಸೇವೆಯನ್ನು ಎಲ್ಲರೂ ಸ್ಮರಿಸಿಕೊಂಡು ಪಕ್ಷದ ಉನ್ನತಿಗಾಗಿ ಎಲ್ಲರೂ ಶ್ರಮಿಸಬೇಕೆಂದು ಎಂದು ತಿಳಿಸಿದರು.
ಹಿರಿಯ ಕಾಂಗ್ರೆಸ್ ನೇತಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಜಿ ಚಂದ್ರಹಾಸ ರೈ, ದಲಿತ ಕಾಂಗ್ರೆಸ್ ನೇತಾರ ಐತಪ್ಪ ಚೆನ್ನಗುಳಿ, ಕುಂಜಾರು ಮೊಹಮ್ಮದ್ ಹಾಜಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಂ ಅಬ್ಬಾಸ್, ಶ್ಯಾಮ್ ಪ್ರಸಾದ್ ಮಾನ್ಯ, ಖಾದರ್ ಮಾನ್ಯ, ಯುವ ಕಾಂಗ್ರೆಸ್ ಕಾಸರಗೋಡು ಮಂಡಲ ಅಧ್ಯಕ್ಷ ಮ್ಯಾಥ್ಯೂಸ್, ಯುವ ಕಾಂಗ್ರೆಸ್ ಬದಿಯಡ್ಕ ಮಂಡಲ ಅಧ್ಯಕ್ಷ ಶಾಫಿ ಪಯ್ಯಲಡ್ಕ, ಚಂದ್ರಹಾಸ ಮಾಸ್ತರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಡಲ ಕಾರ್ಯದರ್ಶಿಗಳು ವಾರ್ಡ್ ಅಧ್ಯಕ್ಷರು ಯುವ ಕಾಂಗ್ರೆಸ್ ಕಾರ್ಯಕರ್ತರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಮಂಡಲ ಉಪಾಧ್ಯಕ್ಷ ಪಿಜಿ ಜಗನ್ನಾಥ ರೈ ಸ್ವಾಗತಿಸಿ, ಕಾರ್ಯದರ್ಶಿ ರಾಮ ಪಟ್ಟಾಜೆ ವಂದಿಸಿದರು. ಪಿ.ಎಚ್.ಡಿ. ಪದವಿ ಪಡೆದ ಮಮ್ಮದ್ ಸುಹೈಲ್ ಇವರನ್ನು ಜಿಲ್ಲಾಧ್ಯಕ್ಷರು ಸ್ಮರಣಿಕೆ ಶಾಲು ಹೊದಿಸಿ ಸನ್ಮಾನಿಸಿದರು.






