HEALTH TIPS

ಸೌರವ್ಯೂಹದಾಚೆಗಿನ ಗ್ರಹಗಳಿಂದ ರೇಡಿಯೋ ಸಿಗ್ನಲ್!

              ಲಂಡನ್: ವಿಶ್ವದ ಅತ್ಯಂತ ಶಕ್ತಿಶಾಲಿ ರೇಡಿಯೋ ಆಯಂಟೆನಾವಾದ ನೆದರ್‌ಲ್ಯಾಂಡ್‌ನ ಲೋ ಫ್ರಿಕ್ವಿನ್ಸಿ ಆರ್ರೆ (ಲೋಫಾರ್)ಯು ದೂರದ ನಕ್ಷತ್ರ ಮಂಡಲಗಳಿಂದ ರೇಡಿಯೋ ಸಂಕೇತಗಳನ್ನು ಗ್ರಹಿಸಿರುವುದಾಗಿ ತಿಳಿದುಬಂದಿದೆ. ಈ ನಕ್ಷತ್ರಗಳ ಸುತ್ತ ತಿರುಗುತ್ತಿರುವ ಗ್ರಹಗಳಿಂದ ರೇಡಿಯೋ ಸಂಕೇತ ಬಂದಿರಬಹುದೆಂದು ಅವರು ಶಂಕಿಸಿದ್ದಾರೆ.

           ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ. ಬೆಂಜಮಿನ್ ಪೋಪ್‌ ಹಾಗೂ ನೆದರ್‌ಲ್ಯಾಂಡ್‌ನ ರಾಷ್ಟ್ರೀಯ ಖಗೋಳ ವೀಕ್ಷಣಾಲಯ ಆಸ್ಟ್ರೋನ್‌ನ ವಿಜ್ಞಾನಿಗಳು ಈ ರೇಡಿಯೋ ಸಿಗ್ನಲ್‌ಗಳನ್ನು ಪತ್ತೆಹಚ್ಚಿದ್ದಾರೆ.

           ರೇಡಿಯೋ ಸಿಗ್ನಲ್‌ಗಳನ್ನು ಪತ್ತೆಹಚ್ಚುವ ನೂತನ ತಂತ್ರಜ್ಞಾನವು ಬಾಹ್ಯಾಕಾಶ ಕ್ಷೇತ್ರದ ಸಂಶೋಧನೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇದರಿಂದಾಗಿ ನಕ್ಷತ್ರಪುಂಜಗಳಲ್ಲಿರುವ ಗ್ರಹಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಈ ನೂತನ ತಂತ್ರಜ್ಞಾನವು ದೂರದ ನಕ್ಷತ್ರ ರೇಡಿಯೋ ಸಿಗ್ನಲ್‌ಗಳು ದೂರದ ನಕ್ಷತ್ರಮಂಡಲಗಳಲ್ಲಿರುವ ಗ್ರಹಗಳಲ್ಲಿ ಜೀವಿಗಳಿರುವ ಸಾಧ್ಯತೆಯ ಬಗ್ಗೆಯೂ ಸುಳಿವು ನೀಡಿದೆ ಎಂದು ಡಾ.ಬೆಂಜಮಿನ್ ಪೋಪ್ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries