HEALTH TIPS

ಡ್ರೋನ್ ಗಳ ಸಹಾಯದಿಂದ ಗ್ರಾಮೀಣ ಪ್ರದೇಶಗಳ ಭೂ ದಾಖಲೆಗಳ ಡಿಜಿಟಲೀಕರಣ: ಪ್ರಧಾನಿ ಮೋದಿ

                 ನವದೆಹಲಿ: ಹೊಸ ಡ್ರೋನ್ ನೀತಿ ದೇಶದಲ್ಲಿ ಉತ್ತಮ ಫಲಿತಾಂಶ ನೀಡುತ್ತಿದ್ದು, ಡ್ರೋನ್ ಮೂಲಕ ಗ್ರಾಮಾಂತರ ಪ್ರದೇಶಗಳ ಭೂಮಿ ದಾಖಲೆಗಳ ಡಿಜಿಟಲೀಕರಣ ಮಾಡುವಲ್ಲಿ ತಯಾರಾಗುತ್ತಿದ್ದು ಜಗತ್ತಿನಲ್ಲಿಯೇ ಮೊದಲ ದೇಶ ಭಾರತವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

            ಇಂದು ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಡ್ರೋನ್ ಗಳ ಬಳಕೆ ಬಗ್ಗೆ ಜನರ ಭಾವನೆಗಳನ್ನು ಹಿಡಿಯುವುದು ಮುಖ್ಯವಾಗುತ್ತದೆ. ಇಂದಿನ ಯುವಜನತೆ ಮತ್ತು ವಿಶ್ವದ ಸ್ಟಾರ್ಟ್ -ಅಪ್ಸ್ ಗಳು ಈ ವಿಷಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದಾರೆ. ಡ್ರೋನ್ ವಲಯಗಳು ಹಲವು ನಿರ್ಬಂಧಗಳು ಮತ್ತು ನಿಯಮಗಳನ್ನು ಒಳಗೊಂಡಿದ್ದವು. ಅದು ಇತ್ತೀಚೆಗೆ ಬದಲಾಗಿದೆ. ಹೊಸ ಡ್ರೋನ್ ನೀತಿ ಉತ್ತಮ ಫಲಿತಾಂಶ ನೀಡುತ್ತಿದೆ ಎಂದರು.

              ಈ ವರ್ಷದ ಕಳೆದ ಆಗಸ್ಟ್ 25ರಂದು ದೇಶದಲ್ಲಿ ಹೊಸ ಡ್ರೋನ್ ನೀತಿ ತರಲಾಯಿತು. ಇಂದಿನ ಮತ್ತು ಭವಿಷ್ಯದ ಸಾಧ್ಯತೆಗಳಿಗೆ ಅನುಗುಣವಾಗಿ ಈ ನೀತಿಯನ್ನು ರೂಪಿಸಲಾಗಿದೆ ಎಂದರು.              ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಡ್ರೋನ್ ಗಳು ಪ್ರಮುಖ ಪಾತ್ರ ವಹಿಸಿವೆ. ಮಣಿಪುರದಲ್ಲಿ ದ್ವೀಪಕ್ಕೆ ಡ್ರೋನ್ ಮೂಲಕ ವಿತರಣೆ ಮಾಡಲಾಗಿದೆ. ತೆಲಂಗಾಣದಲ್ಲಿ ಡ್ರೋನ್ ಮೂಲಕ ಲಸಿಕೆ ನೀಡುವ ಪ್ರಯೋಗ ಮಾಡಲಾಗಿದೆ. ಗುಜರಾತ್ ನ ಭಾವನಗರದಲ್ಲಿ ನ್ಯಾನೋ-ಯೂರಿಯಾ ವನ್ನು ಡ್ರೋನ್ ಮೂಲಕ ಸಿಂಪಡಿಸಲಾಗಿದೆ ಎಂದರು ಪ್ರಧಾನ ಮಂತ್ರಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries