ಕಾಸರಗೋಡು: ಕೇರಳ ರಿಪೋರ್ಟರ್ಸ್ ಆಂಡ್ ಮೀಡಿಯಾ ಪರ್ಸನ್ಸ್ ಯೂನಿಯನ್ ನೇತೃತ್ವದ ಮಾಧ್ಯಮ ಕ್ಷೇತ್ರದ ನಾನ್ ಜರ್ನಲಿಸ್ಟ್ ಸಂಘಟನೆಯಾದ ಕೆ.ಆರ್.ಎಂ.ಯು ಕಾಸರಗೋಡು ಜಿಲ್ಲಾ ಸಮಿತಿ ರೂಪೀಕರಣಗೊಂಡಿದೆ. ಅ|ಧ್ಯಕ್ಷರಾಗಿ ರಾಜೇಶ್ ಪಳ್ಳಿಕ್ಕೆರೆ(ವೀಕ್ಷಣ), ಸುನಿಲ್ ನೋರ್ತ್ ಕೊಟ್ಟಚ್ಚೇರಿ(ದೇಶಾಭಿಮಾನಿ) ಎಂಬವರ ಸಮಿತಿ ರಚಿಸಲಾಗಿದೆ.
ಮಾಧ್ಯಮ ಕ್ಷೇತ್ರದೊಂದಿಗೆ ಸಂಪರ್ಕದಲ್ಲಿರುವ ಕಾರ್ಯಾಲಯ ವಿಭಾಗ, ಡಿಟಿಪಿ ಪ್ರಿಂಟಿಂಗ್, ಪತ್ರಿಕಾ ವಿತರಕರು, ಏಜೆಂಟರು ಎಂಬವರು ಈ ಸಂಘಟನೆಯ ಸದಸ್ಯರಾಗಬಹುದಾಗಿದೆ. ಕ್ಷೇಮನಿಧಿ ಸಹಿತ ಸರ್ಕಾರದ ನೆರವನ್ನು ಈ ಮೂಲಕ ಸದಸ್ಯರಿಗೆ ನೆರವು ಒದಗಿಸುವುದು ಲಕ್ಷ್ಯವಾಗಿದೆ. ಬಿಕ್ಕಟ್ಟಿನ ಸಮಯದಲ್ಲಿ ಸದಸ್ಯರಿಗೆ ವೃತ್ತಿಪರ ಬೆಂಬಲವನ್ನು ಒದಗಿಸುವ ಜವಾಬ್ದಾರಿಯನ್ನು ಸಂಘಟನೆ ಹೊಂದಿದೆ.




