ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಶ್ರೀ ಕ್ಷೇತ್ರ ಸೌತಡ್ಕ ದಲ್ಲಿ ಕೊಕ್ಕಡ ಸುಬ್ರಾಯ ಆಚಾರ್ಯ ರ ಸಂಸ್ಮರಣೆ ಹಾಗು ಯಕ್ಷಗಾನ ತಾಳಮದ್ದಳೆ ನಡೆಯಿತು.ಪುರೋಹಿತ, ಹವ್ಯಾಸಿ ಕಲಾವಿದ ವರದಶಂಕರ ದಾಮ್ಲೆ ಸಂಸ್ಮರಣಾ ಭಾಷಣ ನಿರ್ವಹಿಸಿದರು. "ಸಂಸ್ಕೃತ ವಿದ್ವಾಂಸ ರಾಗಿದ್ದು ಕೊಕ್ಕಡ ಸುಬ್ರಾಯ ಆಚಾರ್ಯರು ಯಕ್ಷಗಾನದ ಸಮರ್ಥ ನಿರ್ದೇಶಕರಾಗಿದ್ದರು. ಕಲಾವಿದರನ್ನು ರೂಪುಗೊಳಿಸುವಲ್ಲಿ, ಪಾತ್ರವಾಗಿಸುವಲ್ಲಿ ಶ್ರೀಯುತರ ಕೊಡುಗೆ ಅಪಾರ. ಇಂತಹ ಮಹಾನ್ ವ್ಯಕ್ತಿಗಳ ಸಂಸ್ಮರಣೆ ಸಿರಿಬಾಗಿಲು ಪ್ರತಿಷ್ಠಾನವು ನಡೆಸುತ್ತಿರುವುದು ಸ್ತುತ್ಯರ್ಹ ಕಾರ್ಯ ಎಂದರು.
ಆಡಳಿತ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ಕುಮಾರ ಮುಂಡ್ರುಪ್ಪಾಡಿ, ವೆಂಕಟೇಶ ಆಚಾರ್ ನೂಜೆ, ಹರಿಪ್ರಸಾದ್ ಎಡಪಡಿತ್ತಾಯ ಮೊದಲಾದವರು ಶುಭ ಹಾರೈಸಿದರು. ಜಯಪ್ರಕಾಶ್ ಹೆಬ್ಬಾರ್ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಪ್ರತಿಷ್ಠಾನದ ಕಾರ್ಯ ಯೋಜನೆ ಬಗ್ಗೆ ಪ್ರಸ್ಥಾಪಿಸಿದರು.
ಬಳಿಕ ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ವೀರವರ್ಮ ಕಾಳಗ ಪ್ರಸಂಗ ತಾಳಮದ್ದಳೆ ನಡೆಯಿತು. ರಮೇಶ್ ಭಟ್ ಪುತ್ತೂರು,ಭಾಗವತಿಕೆಯಲ್ಲಿ, ಚಂದ್ರಶೇಖರ ಕೊಂಕಣಾಜೆ ಮತ್ತು ಜನಾರ್ಧನ ತೋಳ್ಪಡಿತ್ತಾಯ ಹಿಮ್ಮಳ ದಲ್ಲಿ ಸಹಕರಿಸಿದರು. ರಾಧಾಕೃಷ್ಣ ಕಲ್ಚಾರ್ (ವೀರವರ್ಮ), ಹರೀಶ್ ಬಳಂತಿಮೊಗರು(ಕೃಷ್ಣ), ವೈಕುಂಠ ಹೇರ್ಳೆ(ಹನೂಮಂತ), ದಿನಕರ ಗೋಖಲೆ(ಯಮ), ಮಹದೇವ ಭಟ್(ಅರ್ಜುನ) ಸಹಕರಿಸಿದರು. ಸೌತಡ್ಕ ದೇವಸ್ಥಾನದ ಆಡಳಿತ ಸಮಿತಿ ಸಂಪೂರ್ಣ ಸಹಕರಿಸಿದರು.




